- ಬೆಳಗಾವಿ ಜಿಲ್ಲೆ ನಿಪ್ಪಾಣಿ ನಗರಸಭೆ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಬಳಿಕ ಯತ್ನ
- ಮಂಗಳೂರಿನ ಸುರತ್ಕಲ್ ಬಸ್ ನಿಲ್ದಾಣದ ಬಳಿಯೂ ಪ್ರತ್ಯಕ್ಷವಾಗಿದ್ದ ‘ಭಗವಾಧ್ವಜ‘
ಸ್ವಾತಂತ್ರ್ಯೋತ್ಸವದ ಸಂಭ್ರಮದ ನಡುವೆಯೇ ನಗರಸಭಾ ಸದಸ್ಯರಿಬ್ಬರು ‘ಭಗವಾಧ್ವಜ’ ಹಾರಿಸಲು ಮುಂದಾದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಬೆಳಗಾವಿಯ ನಿಪ್ಪಾಣಿ ನಗರಸಭೆ ಮೇಲೆ ಮರಾಠಿ ಭಾಷಿಕ ನಿಪ್ಪಾಣಿ ನಗರಸಭಾ ಸದಸ್ಯರಾದ ವಿನಾಯಕ ವಾಡೆ ಹಾಗೂ ಸಂಜಯ ಸಾಂಗಾವಕರ್ ಅವರು ಭಗವಾಧ್ವಜ ಹಾರಿಸಲು ಮುಂದಾಗಿದ್ದಾರೆ. ಇದನ್ನು ಗಮನಿಸಿದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಅವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ವಾಗ್ವಾದ ನಡೆದು, ಅವರ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ.
‘ಇವತ್ತು ಸ್ವಾತಂತ್ರ್ಯ ದಿನ. ಇದನ್ನು ಹಾರಿಸಲು ನಿಮಗೆಷ್ಟು ಧೈರ್ಯ. ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ’ ಎಂದು ಸ್ಪಷ್ಟವಾಗಿ ವಿರೋಧ ವ್ಯಕ್ತಪಡಿಸಿದ್ದರಿಂದ ಕೊನೆಗೆ ಇಬ್ಬರೂ ಹಿಂದೆ ಸರಿದಿದ್ದಾರೆ.
ಮಾಜಿ ಸಚಿವೆ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಸ್ಥಳೀಯ ಅಧಿಕಾರಿಗಳ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣದ ಬಳಿಕ ಈ ಘಟನೆ ನಡೆದಿದೆ.
ಮಂಗಳೂರಿನ ಸುರತ್ಕಲ್‌ನಲ್ಲೂ ಪ್ರತ್ಯಕ್ಷವಾಗಿದ್ದ ಭಗವಾಧ್ವಜ
ಮಂಗಳೂರಿನ ಸುರತ್ಕಲ್ ಬಸ್ ಸ್ಟಾಂಡ್‌ನಲ್ಲಿಯೂ ಕೂಡ ಸಂಘಪರಿವಾರದ ಕಾರ್ಯಕರ್ತರು ಭಗವಾಧ್ವಜ ಹಾರಿಸಿ, ತಿರಂಗಾ ಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಭಗವಾಧ್ವಜಕ್ಕೆ ಪೊಲೀಸರು ಭದ್ರತೆ ನೀಡಿ, ಕಾವಲು ಕಾಯುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.

ಮೊದಲು ಹರಿದಾಡಿದ್ದ ಫೋಟೋ
ಈ ಹಿನ್ನೆಲೆಯಲ್ಲಿ ಮಂಗಳೂರು ನಗರ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಅವರನ್ನು ಸಂಪರ್ಕಿಸಿದಾಗ, “ನಿನ್ನೆ ಅಖಂಡ ಭಾರತ ಸಂಕಲ್ಪ ಕಾರ್ಯಕ್ರಮದಡಿ ರಾತ್ರಿ ವಿಶ್ವ ಹಿಂದೂ ಪರಿಷತ್ ಪಂಜಿನ ಮೆರವಣಿಗೆ ಆಯೋಜಿಸಿತ್ತು. ಆ ಕಾರ್ಯಕ್ರಮದ ಭಾಗವಾಗಿ ಆ ಧ್ವಜವನ್ನು ಹಾಕಿದ್ದಾರೆ. ಬೆಳಗ್ಗೆ ಬಂದು ಅವರೇ ತೆಗೆದಿದ್ದಾರೆ’ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಮಂಗಳೂರು ಕಮಿಷನರ್ ಸ್ಪಷ್ಟೀಕರಣ ನೀಡಿ ಕಳುಹಿಸಿರುವ ಫೋಟೋ
‘ಪೊಲೀಸರು ರಾತ್ರಿ ಗಸ್ತಿನ ಕರ್ತವ್ಯದ ಭಾಗವಾಗಿ ಪ್ರತಿನಿತ್ಯ ಅಲ್ಲೇ ವಾಹನ ನಿಲ್ಲಿಸಿದ್ದರು. ಭಗವಾಧ್ವಜಕ್ಕಾಗಿ ಕಾವಲು ನಿಂತಿದ್ದಲ್ಲ. ಬೆಳಗ್ಗೆ ಯಾರೋ ಫೋಟೋ ತೆಗೆದು ಹರಿಯಬಿಟ್ಟಿದ್ದಾರೆ. ಸದ್ಯ ಆ ಧ್ವಜ ಅಲ್ಲಿ ಇಲ್ಲ. ಬೆಳಗ್ಗೆಯೇ ಸಂಘಟಕರು ಬಂದು ತೆಗೆದಿದ್ದಾರೆ’ ಎಂದು ತಿಳಿಸಿದ್ದಾರೆ.
ಭಾರತ ಹಲವು ಮತಗಳ ಸಮ್ಮಿಶ್ರಣ
ಸರ್ವಜನಾಂಗದ ಶಾಂತಿಯ ತೋಟ ರಸಿಕರ ಕಂಗಳ ಸೆಳೆಯುವ ನೋಟ
ಇದೆಲ್ಲವನ್ನೂ ನಮ್ಮ ಬುಡಕಟ್ಟು ಮೂಲನಿವಾಸಿಗಳು ಅಂದಿನಿಂದ ಇಂದಿನವರೆಗೂ ಸ್ವೀಕರಿಸಿಕೊಂಡು ಬಂದಿದ್ದಾರೆ
ಸ್ಯಾಡಿಷ್ಟಗಳು ಹಿಂದು ಮೂಲಭೂತವಾದಿಗಳು ಮಾಡುವ ಈ ಹೀನಕೃತ್ಯದಿಂದ ಇವರು ದೇಶದ್ರೋಹಿಗಳಾಗಿ ಬದಲಾಗುತ್ತಿದ್ದಾರೆ