ಬೆಳಗಾವಿಯ ಹಿಂಡಲಗಾದ ಗಣಪತಿ ದೇವಾಲಯ ಸಮೀಪದ ಹೊಂಡದಲ್ಲಿ ತಾಯಿ, ಮಗ ಬಿದ್ದು ಮೃತಪಟ್ಟಿದ್ದಾರೆ. ಭಾನುವಾರ ಇಬ್ಬರ ಶವ ಪತ್ತೆಯಾಗಿದೆ.
ಬೆಳಗಾವಿ ತಾಲೂಕಿನ ಕನಕಾಂಬಾ ಗ್ರಾಮದ ನಿವಾಸಿಗಳಾದ ಕವಿತಾ ಜುನೇಬೆಳಗಾಂವಕರ (35) ಹಾಗೂ ಅವರ ಪುತ್ರ ಸಮರ್ಥ (13) ಮೃತರು ಎಂದು ಗುರುತಿಸಲಾಗಿದೆ.
ಅಕ್ಟೋಬರ್ 30ರಂದು ಮನೆಯಿಂದ ಕಾಣೆಯಾಗಿದ್ದರು. ಆದರೆ ಹೊಂಡದಲ್ಲಿ ಯಾವಾಗ ಹಾರಿ ಬಿದ್ದಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಸಾವಿಗೆ ಕೌಟುಂಬಿಕ ಕಲಹವೇ ಘಟನೆಗೆ ಕಾರಣವಾಗಿದೆ ಎನ್ನಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ
ಈ ಕುರಿತು ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆದಿದೆ.