ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಉಗಾರ ಖುರ್ದನ ಫರೀದಖಾನವಾಡಿ ತೋಟದಲ್ಲಿ ತಾನು ಹೆತ್ತ ಮಗನನ್ನೇ ಚಾಕುವಿನಿಂದ ಇರಿದು, ನಂತರ ಕತ್ತು ಹಿಚುಕಿ ಕೊಲೆಗೈದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಕೌಟುಂಬಿಕ ಕಲಹದಲ್ಲಿ ಎರಡು ವರ್ಷ 9 ತಿಂಗಳಿನ ಸಾತ್ವಿಕ್ ಎಂಬ ಕಂದಮ್ಮನನ್ನು ಕೊಂದಿದ್ದು, ಈ ಕುರಿತು ರಾಹುಲ ಮಾರುತಿ ಕಟಗೇರಿ ಕೊಲೆ ಆರೋಪಿ ತನ್ನ ಪತ್ನಿಯ ವಿರುದ್ಧ ಪೋಲಿಸರಿಗೆ ದೂರು ನೀಡಿದ್ದು, ಭಾಗ್ಯಶ್ರೀ ಪೋಲಿಸ್ ವಶದಲ್ಲಿದ್ದು, ಕೌಟುಂಬಿಕ ಕಲಹವೇ ಈ ಘಟನೆ ಕಾರಣವೆಂದು ಹೇಳಲಾಗಿದೆ.
ಈ ಬಗ್ಗೆ ಸ್ಥಳಕ್ಕೆ ಬೆಳಗಾವಿ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಆರ್.ಎಸ್. ಬಸರಗಿ, ಡಿವೈಎಸ್‌ಪಿ ಪ್ರಶಾಂತ ಮುನ್ನೋಳಿ, ಸಿಪಿಐ ಸಂತೋಶ ಹಳ್ಳೂರ, ಪಿಎಸ್‌ಐ ಜಿ.ಜಿ. ಬಿರಾದರ, ಸಿಡಿಪಿಓ ಸಂಜೀವಕುಮಾರ ಸದಲಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.