ನಾ ಡ್ರೈವರ್ ಖ್ಯಾತಿಯ ಗಾಯಕ ಮಾಳು ನಿಪನಾಳ ಹಾಗೂ ಸ್ನೇಹಿತರಿಂದ ಯುವಕನ ಮೇಲೆ ಗುಂಪು ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ನಿಪನಾಳ ಗ್ರಾಮದಲ್ಲಿ ನಡೆದಿದ್ದು, ಹಲ್ಲೆಗೊಳಗಾದ ಯುವಕ ಮತ್ತು ಆತನ ಸಹೋದರಿ ಚಿಕ್ಕೋಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿಪನಾಳ ಗ್ರಾಮದ ಹೊರವಲಯದಲ್ಲಿ ಯುವಕ ಹಾಗೂ ಆತನ ಸಹೋದರಿ ಬೈಕ್ ಮೇಲೆ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಜಾನಪದ ಗಾಯಕ ಮಾಳು ನಿಪನಾಳ ಹಾಗೂ ಆತನ ಸ್ನೇಹಿತರು ಕಾರಿನಲ್ಲಿ ತೆರಳುತ್ತಿದ್ದರು. ಎದುರಿಗಿದ್ದ ಯುವಕನ ಬೈಕ್ ಮೈಮೇಲೆ ಬರುವಂತೆ ಕಾರು ಓಡಿಸಿಸುತ್ತಿದ್ದು, ಈ ಸಮಯದಲ್ಲಿ ಬೈಕ್ ಮೇಲಿದ್ದ ಮಹಿಳೆ ನೋಡಿಕೊಂಡು ಸಂಚರಿಸಿ ಎಂದು ಹೇಳುತ್ತಿದ್ದಂತೆ; ಮಾಳು ನಿಪನಾಳ ಹಾಗೂ ಆತನ ಸ್ನೇಹಿತರು ಹಲ್ಲೆ ನಡೆಸಿದ್ದಾರೆ. ಇದರಿಂದ ವ್ಯಕ್ತಿಯ ತಲೆಗೆ ಗಂಭೀರವಾಗಿ ಗಾಯವಾಗಿದ್ದು ಯುವಕ ಹಾಗೂ ಆತನ ಸಹೋದರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ವರದಿ ಓದಿದ್ದೀರಾ? ಬೆಳಗಾವಿ | ತಹಶೀಲ್ದಾರ್ ಕಚೇರಿಯಲ್ಲೇ ಆತ್ಮಹತ್ಯೆಗೆ ಶರಣಾದ ಆಪ್ತ ಸಹಾಯಕ
ಮಾಳು ನಿಪನಾಳ ಯುವಕನ ಮೇಲೆ ಹಲ್ಲೆ ಮಾಡಿದ್ದು ಗಮನಕ್ಕೆ ಬಂದಿದ್ದು, ಅವರ ಜೊತೆ ಮಾತನಾಡಲಾಗಿದೆ ಎಂದು ಬೆಳಗಾವಿ ಎಸ್ ಪಿ ಭಿಮಾಶಂಕರ ಗುಳೆದ ಮಾಧ್ಯಮದವರೊಂದಿಗೆ ಮಾಹಿತಿ ನೀಡಿದ್ದಾರೆ.