ಬೆಳಗಾವಿ | ಪೇಜಾವರ ಸ್ವಾಮೀಜಿ ನಡೆ ಸಂವಿಧಾನ ವಿರೋಧಿಯಾಗಿದೆ: ಸಿದಾರ್ಥ ಸಿಂಗೆ

Date:

Advertisements

ತಮಗೆ ಮಾತ್ರ ಗೌರವ ದೊರಕಿಸುವ ಸಂವಿಧಾನ ಜಾರಿಗೆ ಬರಬೇಕು ಎಂದು ಪೇಜಾವರ ಸ್ವಾಮಿಗಳು ಆಶಿಸುತ್ತಿರುವುದು ಸಂವಿಧಾನ ವಿರೋಧಿ ನಡೆಯಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಸಿದಾರ್ಥ ಸಿಂಗೆ ಹೇಳಿದರು.

ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ಬಾಬು ಜಗಜೀವನರಾಂ ಭವನದಲ್ಲಿ ನಡೆದ 72ನೇ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮನುಸ್ಮೃತಿಯೇ ವೈದಿಕರ ಸಂವಿಧಾನವಾಗಿ ಜಾರಿಯಲ್ಲಿದ್ದ ಕಾಲದಲ್ಲಿ ಶೂದ್ರಾತಿ ಶೂದ್ರರು ಸಮಾಜದ ಮುಖ್ಯ ವಾಹಿನಿಯಿಂದ ದೂರವಾಗಿದ್ದರು. ಮತ್ತು ಪುರೋಹಿತಶಾಹಿ ವರ್ಗದ ಅಟ್ಟಹಾಸ ಮೆರೆದಿತ್ತು. ಆದರೆ ಅಂಬೇಡ್ಕರ್ ಭಾರತದ ಸಂವಿಧಾನದ ಮೂಲಕ ಈ ದೇಶದ ಕಟ್ಟಕಡೆಯ ಜನರನ್ನೂ ಮನುಷ್ಯರಂತೆ ಕಂಡು ಎಲ್ಲರಿಗೂ ವಿದ್ಯೆ, ಆಸ್ತಿ, ಅಧಿಕಾರ ಹೊಂದುವ ಅವಕಾಶವನ್ನು ನೀಡಲು ಅನುವು ಮಾಡಿಕೊಟ್ಟರು. ಅದನ್ನು ಸಹಿಸಲಾಗದ ಪೇಜಾವರ ಸ್ವಾಮೀಜಿ ತಮಗೆ ಗೌರವ ದೊರಕಿಸುವ ಸಂವಿಧಾನ ಜಾರಿಯಾಗಲಿ ಎಂದು ಹೆಳುವ ಮೂಲಕ ಮನುಸ್ಮೃತಿಯನ್ನು ಎತ್ತಿಹಿಡಿದು ಸಂವಿಧಾನ ವಿರೋಧಿ ನಡೆ ಅನುಸರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಳ ಸಮುದಾಯಕ್ಕೆ ಸೇರಿದವರು ಮಂತ್ರಿ, ಮುಖ್ಯಮಂತ್ರಿ ಅಲ್ಲದೇ ರಾಷ್ಟ್ರಪತಿಗಳೂ ಆದರು. ಇದು ಪೇಜಾವರ ಸ್ವಾಮಿಗಳಿಗೆ ಅಸಹನೀಯವಾಗಿದೆ ತಮಗೆ ಮಾತ್ರ ಸಮಾಜದಲ್ಲಿ ಸಿಗುತ್ತಿದ್ದ ಗೌರವ ಮಾನ ಸನ್ಮಾನಗಳು ಮನುಷ್ಯರಾದ ಎಲ್ಲರಿಗೂ ಸಿಗುತ್ತಿರುವದು ಅವರಿಗೆ ಸಹಿಸಲು ಆಗುತ್ತಿಲ್ಲ. ಆ ಕಾರಣದಿಂದ ಅಂಬೇಡ್ಕರ್ ರಚಿಸಿದ ಸಂವಿಧಾನ ಬದಲಾಗಬೇಕೆಂದು ಬಯಸುತ್ತಿದ್ದಾರೆ. ಎಲ್ಲರೂ ಅವರ ನಡೆಯನ್ನು‌ ಖಂಡಿಸಲೆಬೇಕು ಎಂದರು.

Advertisements

ಪರಶುರಾಮ ಟೊಣಪೆ ಮಾತನಾಡಿ, ನೂತನವಾಗಿ ರಚನೆಗೊಂಡಿರುವ ಚಿಕ್ಕೋಡಿ ಜಿಲ್ಲೆಗೆ ಡಾ.ಬಾಬಾಸಾಹೇಬ ಅಂಬೇಡ್ಕರ್ ಜಿಲ್ಲೆ ಎಂದು ನಾಮಕರಣ ಮಾಡಿ ಜಿಲ್ಲೆಯನ್ನು ಘೋಷಿಸಬೇಕು. ಇಲ್ಲವಾದಲ್ಲಿ ಭೀಮವಾದ ಡಿಎಸ್ಎಸ್ ವತಿಯಿಂದ ಉಗ್ರ ಹೋರಾಟವನ್ನು ಹಮ್ಮಿಕೊಳ್ಳುಲಾಗುತ್ತದೆ ಎಂದು ಎಚ್ಚರಿಸಿದರು.

ಈ ವರದಿ ಓದಿದ್ದೀರಾ? ಬೆಳಗಾವಿ | ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ರೈತ, ಕಾರ್ಮಿಕರ ಎಚ್ಚರಿಕೆ ಜಾಥಾ

ಈ ಸಂದರ್ಭದಲ್ಲಿ ಚಿದಾನಂದ ತಳಕೇರಿ, ಕೆಂಪಣ್ಣ ಶಿರಹಟ್ಟಿ, ಸಂಗೀತಾ ಕಾಂಬಳೆ, ರೇಖಾ ಬಂಗಾರಿ, ಪ್ರಕಾಶ ಕಾಂಬಳೆ, ಸುಖದೇವ್ ತಳವಾರ್, ಗಣಪತಿ ಮೈಶಾಳೆ, ಮಹಾದೇವ ಕಾಂಬಳೆ, ನಿಕಿತಾ ಗಡಾದೆ, ಕಾಮಣ್ಣ ಕಾಂಬಳೆ, ಸಂತೋಷ್ ಕಾಂಬಳೆ, ರಾಕೇಶ್ ನಸಲಾಪುರ, ಸಿದ್ದಪ್ಪ ರಾಜಂಗಳೆ, ಪ್ರವೀಣ ಕಾಂಬಳೆ, ಗೀತಾ ಕಾಂಬಳೆ, ವಾಸು ದೊಡ್ಡಮನಿ, ಸಚಿನ ಕಾಂಬಳೆ ಹಾಗೂ ಸಂಘಟನಾ ಸದಸ್ಯರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

Download Eedina App Android / iOS

X