ಬೆಳಗಾವಿ ಹಾಲು ಒಕ್ಕೂಟ ಹಬ್ಬದ ಸಂದರ್ಭದಲ್ಲಿ ನಂದಿನಿ ಉತ್ಪನ್ನಗಳ 83 ಸಾವಿರ ಕಿಲೋ ನಂದಿನಿ ಉತ್ಪನ್ನಗಳು ಮಾರಾಟವಾಗಿ ದಾಖಲೆ ಸೃಷ್ಟಿಸಿದೆ.
ಈ ಹಿಂದೆ ಕೇವಲ ಪೇಡಾಗೆ ಮಾತ್ರ ಹೆಸರಾಗಿದ್ದ ನಂದಿನಿ ಉತ್ಪನ್ನಗಳು ಸದ್ಯ 127 ಉತ್ಪನ್ನಗಳ ತಯಾರಿಕೆ ಮಾಡುತ್ತಿದ್ದು, ಸದ್ಯ ದಾಖಲೆ ಸೃಷ್ಟಿಸಿದೆ. ಬೆಳಗಾವಿ ಜಿಲ್ಲೆಯಲ್ಲಿ 200ಕ್ಕೂ ಅಧಿಕ ನಂದಿನಿ ಪಾರ್ಲರ್ ಮತ್ತು 400ಕ್ಕೂ ಅಧಿಕ ಡಿಲರ್ಸ್ ಗಳಿದ್ದು, ಇವರ ಮೂಲಕ ನಂದಿನಿ ಉತ್ಪನ್ನಗಳ ಮಾರಾಟವಾಗಿದೆ.
ಈ ವರದಿ ಓದಿದ್ದೀರಾ? ಬೆಳಗಾವಿ | 20ಕ್ಕೂ ಅಧಿಕ ಮಂದಿಗೆ ಕಚ್ಚಿದ್ದ ಕೋತಿ ಸೆರೆ
ಈ ಕುರಿತು ಬಾಲಚಂದ್ರ ಜಾರಕಿಹೊಳಿ ಸಂತಸ ವ್ಯಕ್ತಪಡಿಸಿದ್ದು, ನಂದಿನಿ ಮಾರುಕಟ್ಟೆ ಬೆಳವಣಿಗೆಗೆ ಕಾರಣವಾದ ಒಕ್ಕೂಟದ ಸಿಬ್ಬಂದಿಗಳಿಗೆ, ಕಾರ್ಮಿಕರಿಗೆ ಅಭಿನಂದನೆ ತಿಳಿಸಿದ್ದಾರೆ.