ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಾಪೂರ ಸರ್ಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ನಾಟ್ಯ ಯೋಗ ಟ್ರಸ್ಟ್ ಸಾಲಾಪೂರ ಕನ್ನಡ ಸಾಹಿತ್ಯ ಪರಿಷತ್ ರಾಮದುರ್ಗ ಹಾಗೂ ಈ ದಿನ.ಕಾಮ್ ಸಹಯೋಗದಲ್ಲಿ ಎರಡು ದಿನಗಳ ಕಥಾ ಕಮ್ಮಟ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಮಕ್ಕಳು ಸ್ವತಃ ಕಥೆ, ಕಾವ್ಯ ರಚಿಸುವದನ್ನು ಕಲಿಯಬೇಕು ಎನ್ನುವ ಉದ್ದೇಶದದಿಂದ ಈ ಕಥಾ ಕಮ್ಮಟ ಕಾರ್ಯಗಾರ ನಡೆಸಲಾಯಿತು. ಎರಡು ದಿನಗಳ ಕಾರ್ಯಾಗಾರವನ್ನು ರಂಗಕರ್ಮಿ ಕಲ್ಲಪ್ಪ ಪೂಜೇರ ಇವರು ವಿಧ್ಯಾರ್ಥಿಗಳಿಗೆ ಅನೇಕ ಕಾರ್ಯ ಚಟುವಟಿಕೆಗಳ ಮೂಲಕ ಸ್ವತಂತ್ರವಾಗಿ ಕಥೆ ಬರೆಯುವ ಕೌಶಲ್ಯವನ್ನು ಹೇಳಿಕೊಟ್ಟರು. ಮಕ್ಕಳು ಸಹ ಅತ್ಯಂತ ಆಸಕ್ತಿಯಿಂದ ಕಥೆ ಬರೆಯುವುದನ್ನು ಕಲಿತುಕೊಂಡಿದ್ದು ವಿಶೇಷವಾಗಿತ್ತು.
ಎರಡನೇ ದಿನ ಕಾರ್ಯಾಗಾರದ ಸಮಾರೋಪ ಕಾರ್ಯಕ್ರಮವನ್ನು ಉದ್ಧೇಶಿಸಿ ರಾಮದುರ್ಗ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪಾಂಡುರಂಗ ಜಟ್ಟಗನ್ನವರ ಮಾತನಾಡಿ, ಸಾಲಾಪೂರ ಗ್ರಾಮದ ಶಾಲಾ ಮಕ್ಕಳು ಕ್ರಿಯಾಶೀಲರಾಗಿದ್ದು ಗುರುಗಳು ಸಹ ಒಳ್ಳೆಯ ಶಿಕ್ಷಣವನ್ನು ನೀಡಿದ್ದಾರೆ. ಕಾರ್ಯಾಗಾರ ನಡೆಸಿಕೊಟ್ಟ ಕಲ್ಲಪ್ಪ ಪೂಜೇರ ಇವರು ರಂಗ ಕಲೆಯಿಂದ ಬಂದವರು ಮಕ್ಕಳಿಗಾಗಿ ಅನೇಕ ಕಾರ್ಯಕ್ರಮಗಳನ್ನು ಮಾಡಿದ್ದಾರೆ ಮತ್ತು ಮಕ್ಕಳಿಗಾಗಿ ರಂಗ ತರಬೇತಿಯನ್ನು ಮಾಡಿದ್ದರು. ಮಕ್ಕಳು ದೊಡ್ಡವರು ಬರೆದ ಸಾಹಿತ್ಯವನ್ನು ಓದುತ್ತಾರೆ ಮಕ್ಕಳೆ ಸಾಹಿತ್ಯವನ್ನು ಬರೆಯುವದು ಹೆಚ್ಚು ಅಮೂಲ್ಯವಾಗಿರುತ್ತದೆ ಎಂದರು.
ವಿದ್ಯಾರ್ಥಿಗಳು ಧೀರ್ಘವಾಗಿ ಬರೆಯುವುದನ್ನು ರೂಢಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಧೀರ್ಘ ಉತ್ತರದ ಪ್ರಶ್ನೆ ಗಳಿರುತ್ತವೆ. ಈಗಿನಿಂದಲೇ ತಯಾರಿ ಮಾಡಿಕೊಳ್ಳಲು ಇಂಥ ಕಮ್ಮಟಗಳು ಸಹಕಾರಿಯಾಗುತ್ತವೆ ಎಂದು ಸಮುದಾಯ ಸಾಂಸ್ಕೃತಿಕ ಸಂಘಟನೆಯ ಮುಖ್ಯಸ್ಥ ರಾಜಶೇಖರ ಶಲವಡಿ ತಿಳಿಸಿದರು.
ಅಧ್ಯಕ್ಷಿಯ ಭಾಷಣ ಮಾಡಿದ ಶಾಲೆಯ ಪ್ರಧಾನ ಗುರುಗಳಾದ ಎ.ಎಸ್ ಗಾಣಗಿಯವರು ಮಾತನಾಡಿ, ಶಾಲೆಯಲ್ಲಿ ಗ್ರಂಥಾಲಯ ಸೌಲಭ್ಯವಿದ್ದು ಮಕ್ಕಳು ಸುಲಭವಾಗಿ ಓದಿ ಅರ್ಥೈಸಿಕೊಳ್ಳಬಹುದಾದ ಹಲವು ಪುಸ್ತಕಗಳಿವೆ. ವಿದ್ಯಾರ್ಥಿಗಳು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಥಾ ಕಮ್ಮಟ ಕಾರ್ಯಾಗಾರದ ಕುರಿತು ವಿಧ್ಯಾರ್ಥಿನಿ ಅಲ್ಫಿಯಾ ನಧಾಪ, ಕಾರ್ಯಾಗಾರದ ಗುರುಗಳಾದ ಕಲ್ಲಪ್ಪ ಪೂಜೇರ ಇವರು ನಮ್ಮಗೆ ಅನೇಕ ಕಾರ್ಯಚಟುವಟಿಕೆಗಳ ಮೂಲಕ ಕಥೆ ಬರೆಯುವದನ್ನು ತಿಳಿಸಿಕೊಟ್ಟರು ಮತ್ತು ಕಥಾ ಕಮ್ಮಟ ಕಾರ್ಯಾಗಾರ ನಮ್ಮಗೆ ಬಹಳಷ್ಟು ಸಂತೋವನ್ನು ನೀಡಿದೆ ಎಂದು ಸಂತಸ ಹಂಚಿಕೊಂಡಳು.
ಕಥಾ ಕಮ್ಮಟ ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಸುರೇಶ ಮಾದರ, ಭೀಮರಾವ ದ್ಯಾವನ್ನವರ, ಲಕ್ಷ್ಮಣ ದಂಡಗಿ, ಪ್ರದೀಪ ಹಂಪಣ್ಣವರ, ರಮೇಶ ಬಡಿಗೇರ, ಸಂತಪ್ಪ ದ್ಯಾವಣ್ಣವರ, ಮೈಬೂಬ ಭಾಗವಾನ, ಈರಣ್ಣ ಯಾದವಾಡ ಹಿರಿಯ ಶಿಕ್ಷಕ ಡಿ.ಬಿ. ಹುದ್ದಾರ, ರವೀಂದ್ರ ಇಳಿಗೇರ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಅರ್ಪಿತಾ ದ್ಯಾವನ್ನವರ ಮತ್ತು ತನುಜಾ ಹಂಪಿಹೋಳಿ, ಸಹನಾ ನಾವಿ, ಮೇಘಾ ಕಲ್ಲೇದ, ವಿಜಯಲಕ್ಷ್ಮೀ ಕೆಲವಡಿ, ಕಾವೇರಿ ಮೇಟ್ಟಿನ, ಶಾಲಾ ವಿಧ್ಯಾರ್ಥಿನಿಯರೆ ಕಥಾ ಕಮ್ಮಟ ಕಾರ್ಯಾಕ್ರಮವನ್ನು ನಿರೂಪಿಸಿ ನಡೆಸಿಕೊಟ್ಟಿದ್ದು ವಿಶೇಷವಾಗಿತ್ತು.