ರಂಗಭೂಮಿ ನಮಗೆ ಮನುಷ್ಯನಾಗಿ ಬದುಕುವುದನ್ನು ಕಲಿಸುತ್ತದೆ. ರಂಗಭೂಮಿಯಿಂದ ನಮ್ಮನ್ನು ನಾವು ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ. ರಂಗಭೂಮಿಯೇ ನಮಗೆ ದೊಡ್ಡ ಆದ್ಯಾತ್ಮವಾಗಿದೆ ಎಂದು ಬೆಳಗಾವಿಯ ಸವದತ್ತಿಯಲ್ಲಿ ನಡೆದ ಕರ್ನಾಟಕ ನಾಟಕ ಅಕಾಡೆಮಿ ರಾಜ್ಯ ಸಮಿತಿ ಸದಸ್ಯ ಬಾಬಾಸಾಹೇಬ ಕಾಂಬಳೆ ಹೇಳಿದರು.
ಸವದತ್ತಿಯ ಕೆಎಲ್‌ಇ ಸಂಸ್ಥೆ ಎಸ್‌ವಿಎಸ್ ಬೆಳ್ಳುಬ್ಬಿ ಮಹಾವಿದ್ಯಾಲಯದ ಕನ್ನಡ ವಿಭಾಗ, ಬೆಂಗಳೂರಿನ ಕರ್ನಾಟಕ ನಾಟಕ ಅಕಾಡೆಮಿ, ಧಾರವಾಡದ ಸಕ್ರಿ ಬಾಳಾಚಾರ ಶಾಂತಕವಿ ಟ್ರಸ್ಟ್ ಮತ್ತು ಸವದತ್ತಿಯ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ಸಹಯೋಗದಲ್ಲಿ ಜರುಗಿದ ಆಧುನಿಕ ಕನ್ನಡ ರಂಗಭೂಮಿ ದಿನಾಚರಣೆ ಹಾಗೂ ಝಾಕೀರ್ ನದಾಫ್ ಅವರ ಎರಡು ನಾಟಕಗಳ ಲೋಕಾರ್ಪಣೆ ಮತ್ತು ಕಾಲೇಜು ನಾಟಕ ರಂಗ ತರಬೇತಿ ಶಿಬಿರ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ನಂತರ ಝಾಕೀರ್ ನದಾಪ್ ಅವರ ದೇವಸೂರ ಮತ್ತು ಹುಚ್ಚರ ಕನಸು ಎಂಬ ಎರಡು ನಾಟಕ ಕೃತಿ ಲೋಕಾರ್ಪಣೆ ಮಾಡಿದರು.
ಈ ವರದಿ ಓದಿದ್ದೀರಾ? ಕಿತ್ತೂರು | ಕಾಂಗ್ರೆಸ್ ಶಾಸಕ ಬಾಬಾ ಸಾಹೇಬ್ ಪಾಟೀಲ್‌ರಿಗೆ ಬಿಜೆಪಿಯಿಂದ ₹100 ಕೋಟಿ ಆಫರ್?
ಈ ಸಂದರ್ಭದಲ್ಲಿ ಪ್ರಾಧ್ಯಾಪಕ ಎನ್.ಎ. ಕೌಜಗೇರಿ, ಕೆ.ರಾಮರೆಡ್ಡಿ, ರಾಜಶೇಖರ ನಿಡವಣಿ, ಚಂದ್ರಶೇಖರ್ ಪಠಾನಿ, ವೈ.ಎಂ.ಯಾಕೊಳ್ಳಿ,ಝಾಕೀರ್ ನದಾಫ್, ಡಾ.ಅರುಂಧತಿ ಬದಾಮಿ, ಶಿವಾನಂದ ತಾರಿಹಾಳ, ರಂಗಭೂಮಿ ನಿರ್ದೇಶಕ ಕಲ್ಲಪ್ಪ ಪೂಜೇರ ಸೇರಿದಂತೆ ಬೋಧಕೇತರ ಸಿಬ್ಬಂದಿ ಹಾಗೂ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ಸದಸ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.