ಬೆಳಗಾವಿ ನಗರದ ಹೊರವಲಯದಲ್ಲಿರುವ ಭೂತರಾಮನಹಟ್ಟಿಯ ಕಿರು ಮೃಗಾಲಯದಲ್ಲಿದ್ದ ಗಂಡು ಹುಲಿ ಶೌರ್ಯ (13) ಭಾನುವಾರ ಬೆಳಿಗ್ಗೆ ಅಸುನೀಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಗಂಡು ಹುಲಿ ಶೌರ್ಯನ ರಕ್ತದಲ್ಲಿ ಮೈಕ್ರೋಪ್ಲಾಸ್ಮಾ, ಸೈಟೌಕ್ಸಿನೋಸಿಸ್ ಮತ್ತು ಬೇಬಿಸಿಯೋಸಿಸ್ ಎಂಬ ಅತ್ಯಂತ ವಿರಳ ಕಾಯಿಲೆಯಿಂದ ಬಳಲುತ್ತಿತ್ತು. ಕಳೆದ 21 ದಿನಗಳಿಂದ ನಿರಂತರ ಚಿಕಿತ್ಸೆ ನೀಡಿದರೂ ಫಲಕಾರಿಯಾಗಿದೆ ಭಾನುವಾರ ನಿಧನ ಹೊಂದಿದೆ.
ಇದನ್ನು ಓದಿದ್ದೀರಾ? ಬೆಳಗಾವಿ | ಶಾರ್ಟ್ ಸರ್ಕ್ಯೂಟ್’ನಿಂದ 15 ಎಕರೆ ಕಬ್ಬು ಬೆಳೆಗೆ ಬೆಂಕಿ
2021ರಲ್ಲಿ ಬನ್ನೇರಘಟ್ಟ ಮೃಗಾಲಯದಿಂದ ಬೆಳಗಾವಿ ಕಿರು ಮೃಗಾಲಯಕ್ಕೆ ಶೌರ್ಯನನ್ನು ಸ್ಥಳಾಂತರ ಮಾಡಲಾಗಿತ್ತು. ಸಧ್ಯ ಮೃತಪಟ್ಟ ಹುಲಿ ದೇಹವನ್ನು ಮರಣೋತ್ತರ ಪರೀಕ್ಷೆ ನಂತರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ ಎಂದು ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.