ಬೆಳಗಾವಿ ಜಿಲ್ಲಾ ಸಹಕಾರ (ಡಿಸಿಸಿ) ಬ್ಯಾಂಕ್ ಚುನಾವಣೆಯನ್ನು ಎದುರಿಸಲು ಅಭ್ಯರ್ಥಿಗಳ ಮಧ್ಯೆ ತೀವ್ರ ಪೈಪೋಟಿ ನಿರ್ಮಾಣವಾಗಿದೆ. ಮಂಗಳವಾರ ರಾಮದುರ್ಗದಲ್ಲಿ ನಡೆದ ಘಟನೆ ಈ ರಾಜಕೀಯ ಹೋರಾಟಕ್ಕೆ ಮತ್ತಷ್ಟು ತೀವ್ರತೆ ತಂದಿದೆ.
ರಾಮದುರ್ಗದಿಂದ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಹಾಲಿ ನಿರ್ದೇಶಕ ಎಸ್.ಎಸ್. ಢವಣ ಅವರ ಬೆಂಬಲಿತ ಹನ್ನೊಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪಿಕೆಪಿಎಸ್) ಸದಸ್ಯರು ಭದ್ರತೆಯ ನಡುರಾತ್ರಿ ಡಿಸಿಸಿ ಬ್ಯಾಂಕ್‌ಗೆ ಆಗಮಿಸಿ ಮತದಾನ ಹಕ್ಕು ಪಡೆದರು.
ಢವಣ ಅವರಿಗೆ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಬಲಿಷ್ಠ ಬೆಂಬಲ ನೀಡುತ್ತಿದ್ದು, ತಮ್ಮ ಬೆಂಬಲಿತ ಪಿಕೆಪಿಎಸ್ ಸದಸ್ಯರನ್ನು ಗುಪ್ತ ಸ್ಥಳಕ್ಕೆ ಕರೆದೊಯ್ದಿದ್ದಾರೆಂಬ ಮಾಹಿತಿ ಹೊರಬಿದ್ದಿದೆ. ಇತ್ತ ಮಲ್ಲಣ್ಣ ಯಾದವಾಡ ಹಾಗೂ ಹಾಲಿ ಶಾಸಕ ಅಶೋಕ್ ಪಟ್ಟಣ ಅವರೂ ಈ ಚುನಾವಣೆಗೆ ಸಜ್ಜಾಗಿದ್ದಾರೆ. ಇಬ್ಬರ ನಡುವೆ ಹೊಂದಾಣಿಕೆ ಮೂಡುವ ಸಾಧ್ಯತೆಗಳಿದ್ದರೂ ಅಂತಿಮವಾಗಿ ಹೇಗೆ ಬಣ್ಣ ಬದಲಿಸುತ್ತದೆ ಎಂಬ ಕುತೂಹಲ ತಾರಕಕ್ಕೇರಿದೆ.
ಜಾರಕಿಹೊಳಿ–ಪಟ್ಟಣ–ಯಾದವಾಡ ಬಣಗಳ ನಡುವಿನ ಕಾದಾಟದಿಂದ ಡಿಸಿಸಿ ಬ್ಯಾಂಕ್ ಚುನಾವಣೆ ಮತ್ತಷ್ಟು ರೋಚಕ ಹಂತ ತಲುಪಿದೆ.