ಬೆಳಗಾವಿ | ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಅಭಿವೃದ್ಧಿ, ಮದ್ಯಪಾನ ನಿಷೇಧ

Date:

ಬೆಳಗಾವಿಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮೊಹ್ಮದ್ ರೋಷನ್ ಮಾತನಾಡಿ ಸವದತ್ತಿ ಯಲ್ಲಮ್ಮನ ದೇವಸ್ಥಾನವನ್ನು ಪ್ರವಾಸೋದ್ಯಮ ಇಲಾಖೆ ಮತ್ತು ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಪ್ರಾಧಿಕಾರದ ಸಹಯೋಗದಲ್ಲಿ ಆಧುನಿಕತೆಯೊಂದಿಗೆ ಐತಿಹಾಸಿಕತೆಯನ್ನು ಸಂರಕ್ಷಿಸಿ ಭಕ್ತರಿಗೆ ಮೂಲ ಸೌಲಭ್ಯ ಹಾಗೂ ಮದ್ಯಪಾನ ನಿಷೇಧಗೊಳಿಸಿ ಅವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.

ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ದೇವಿಯ ಸರಾಗ ದರ್ಶನ, ಭಕ್ತರಿಗೆ ಮೂಲ ಸೌಲಭ್ಯ, ಪಾರ್ಕಿಂಗ್, ಮದ್ಯ- ಗುಟಕಾ ನಿರ್ಬಂಧ, ಮುಕ್ತ ಅಡುಗೆ ಮನೆ, ಗೌರವ ಘಟಕ, ದೇವಸ್ಥಾನಕ್ಕೆ ಮೂಲ ರೂಪ, ತಿರುಮಲದ ಮಾದರಿಯಲ್ಲಿ ಕ್ಯೂ ಕೌಂಟರ್, ಹಾಲ್, ದಾಸೋಹ ಭವನ, ಮೆವು ದಾಸೋಹ, ಆನ್‌’ಲೈನ್ ಹುಂಡಿ, ವ್ಯಾಪಾರ ವಹಿವಾಟಿಗೆ ಮತ್ತು ಮೂಲ ಪರಂಪರೆಗಳಿಗೆ ತೊಂದರೆಯಾಗದಂತೆ ಅಭಿವೃದ್ಧಿಯನ್ನು ಕೈಗೊಳ್ಳಲಾಗುತ್ತಿದೆ. ತಾವು ಬೇರೆಯ ಧರ್ಮದವರಾದರೂ ಕೂಡ ಸವದತ್ತಿ ಯಲ್ಲಮ್ಮ ದೇವಿ ಕ್ಷೇತ್ರದ ಅಭಿವೃದ್ಧಿಗೆ ಅವಕಾಶ ಸಿಕ್ಕಿರುವುದು ಸೌಭಾಗ್ಯ ಎಂದು ಜಿಲ್ಲಾಧಿಕಾರಿಗಳಾದ ಮೊಹ್ಮದ್ ರೋಷನ್ ಹೇಳಿದರು.

ಭೀಮಗಡ ಅಭಯಾರಣ್ಯ, ಚಾಪಗಾಂವ್‌, ತಳೇವಾಡಿ, ಆಮಗಾಂವನಂತರಹ ಕಾಡುಪ್ರದೇಶದ ಜನರು ಸ್ವಇಚ್ಛೆಯಿಂದ ಜನವಸತಿಗೆ ಬರಲು ಇಚ್ಚಿಸಿದರೇ, 15 ಲಕ್ಷ ರೂಪಾಯಿ ನೆರವು ನೀಡಿ, ಕಾಡಿನ ಜನರಿಗೆ ಶೈಕ್ಷಣಿಕ ಮತ್ತು ಆರೋಗ್ಯ ವ್ಯವಸ್ಥೆಗಳನ್ನು ನೀಡುವ ನಿಟ್ಟಿನಲ್ಲಿ ಮತ್ತು ಮುಖ್ಯವಾಹಿನಿಗೆ ತರಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದರು. ಇನ್ನು ಬೆಳಗಾವಿಯ ನಾಳೆಯ ತಾಂತ್ರಿಕ ದೋಷವನ್ನು ನಿವಾರಿಸಲು ಈಗಾಗಲೇ ಟನಲ್ ನಿರ್ಮಾನ, ಓವರ್ ಪ್ಲೋಗೆ ಪರ್ಯಾಯ ವ್ಯವಸ್ಥೆ ಮಾಡಲೂ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿಯನ್ನು ಮಾಡಲಾಗಿದೆ. ಎನ್.ಜಿ.ಓ ಕೈಜೋಡಿಸಿದರೇ, ಮುಂದಿನ ಡಿಸೆಂಬರ್ ನಲ್ಲಿ ಕ್ರಮ ಪುನರುಜ್ಜಿವನ ಕೈಗೊಳ್ಳಲಾಗುವುದು ಎಂದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ : ಕಾಶ್ಮೀರದಲ್ಲಿ ಭಯೋತ್ಪಾದಕರು ಹತ್ಯೆ ಮಾಡಿದಾಗ ಒಬ್ಬ ಪೊಲೀಸ್‌ ಅಲ್ಲಿರಲಿಲ್ಲ

ಕಾಶ್ಮೀರದಲ್ಲಿ ಭಯೋತ್ಪಾದಕರು ಹತ್ಯೆ ಮಾಡಿದಾಗ ಒಬ್ಬ ಪೊಲೀಸ್‌ ಅಲ್ಲಿರಲಿಲ್ಲ. ಇದು...

ಬೆಳಗಾವಿ | ಐ ಪಿ ಎಲ್ ಕ್ರಿಕೆಟ್ ಬೆಟ್ಟಿಂಗ್ ಜಾಲ ಪತ್ತೆ ಆರೋಪಿಯನ್ನು ಬಂಧಿಸಿದ ಸೈಬರ್ ಕ್ರೈಮ್ ಪೋಲಿಸರು

ಬೆಳಗಾವಿ ನಗರದಲ್ಲಿ ಐಪಿಎಲ್ ಟೂರ್ನಮೆಂಟ್ ನಲ್ಲಿ ಭರ್ಜರಿ ಬೆಟ್ಟಿಂಗ್ ನಡೆಸಿದ್ದ ಜಾಲವನ್ನು...

ಮಾವಿನ ಹಣ್ಣಿಗೆ ಬಂಪರ್ ಬೆಲೆ ಇದ್ದರೂ ಮಳೆ ಗಾಳಿಯ ಆತಂಕದಲ್ಲಿ ರೈತರು!

ಈ ವರ್ಷದ ಮಾವಿನ ಹಣ್ಣಿನ ಸೀಜ಼ನ್ ಶುರುವಾಗಿದ್ದು, ವಿವಿಧ ತಳಿಯ ಮಾವಿನ...

ಬೆಳಗಾವಿ : ಮಹಿಳೆಯನ್ನು ಕೊಲೆ ಮಾಡಿ ಚಿನ್ನಾಭರಣ ಕಳ್ಳತನ ಮಾಡಿದ್ದ ಆರೋಪಿಗಳ ಬಂಧನ

ಮಹಿಳೆಯನ್ನು ಕೊಲೆ ಮಾಡಿ ಆಭರಣ ಕದ್ದು ಪರಾರಿ ಆಗಿದ್ದ ಅಪ್ರಾಪ್ತ ಸೇರಿ...