ಚಿಕ್ಕೋಡಿ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಆಪರೇಷನ್ ಬಳಿಕ ಬಟ್ಟೆ ಹಾಗೂ ಹತ್ತಿ ಉಂಡೆಯನ್ನು ಹೊಟ್ಟೆಯಲ್ಲಿಯೇ ಬಿಟ್ಟು ಸ್ಟಿಚ್ ಹಾಕಿದ ಘಟನೆ ನಡೆದಿದೆ.
ಚಿಕ್ಕೋಡಿಯ ತಾಯಿ ಮಕ್ಕಳ ಆಸ್ಪತ್ರೆಗೆ ಇತ್ತಿಚಿಗೆ ಮುಗುಳಿ ಗ್ರಾಮದ ಗರ್ಭಿಣಿ ಶೃತಿ ಬಡಿಗೇರ ಫೆ.7 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರು ಹೆರಿಗೆ ಮಾಡಿದ ಬಳಿಕ ಬಾಣಂತಿಯ ಹೊಟ್ಟೆಯಲ್ಲಿಯೇ ಕಾಟನ್ ವೇಸ್ಟ್ ಹಾಗೂ ವೇಸ್ಟ್ ಬಟ್ಟೆ ಬಿಟ್ಟು ಹೊಲಿಗೆ ಹಾಕಿ ಮನೆಗೆ ಕಳಿಸಿದ್ದಾರೆ. ಕೆಲ ದಿನಗಳ ನಂತರ ಬಾಣಂತಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಕುಟುಂಬಸ್ಥರು ಆಕೆಯನ್ನು ಹುಕ್ಕೇರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ವೇಳೆ ಹುಕ್ಕೇರಿ ವೈದ್ಯರು ತಪಾಸಣೆಯ ವೇಳೆ ಬಾಣಂತಿಯ ಹೊಟ್ಟೆಯಲ್ಲಿ ಕಾಟನ್ ಬಟ್ಟೆ ಹಾಗೂ ಹತ್ತಿಯುಂಡೆ ಬಿಟ್ಟು ಹೊಲಿಗೆ ಹಾಕಿದ ಪ್ರಕರಣ ಬೆಳಕಿಗೆ ಬಂದಿದೆ.
ಚಿಕ್ಕೋಡಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರ ವಿರುದ್ಧ ಬಾಣಂತಿಯ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದ ವೈದ್ಯರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ