ಮರಾಠಿಯಲ್ಲಿ ಪಹಣಿ ಕೊಡಲಿಲ್ಲ ಎಂದು ಎಂಇಎಸ್ ಕಾರ್ಯಕರ್ತರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಳಗಾವಿಯ ಅಂಬೇವಾಡಿ ಗ್ರಾಮದಲ್ಲಿ ನಡೆದಿದೆ.
ಪಂಚಾಯತ್ ಕಾರ್ಯದರ್ಶಿ ನಾಗಪ್ಪ ದಾಳಿಗೆ ಒಳಗಾದವರು. ಮಹಾರಾಷ್ಟ್ರ ಎಕೀಕರಣ ಸಮಿತಿಯ ಸಕ್ರಿಯ ಜಿಲ್ಲಾ ಸಂಚಾಲಕ ಚೇತನ ಪಾಟೀಲ ಹಾಗೂ ವಿಕ್ರಂ ಯಳ್ಳೂರಕರ್ ಬೆಂಬಲಿಗರು ಕೃತ್ಯ ಎಸಗಿದ್ದಾರೆ. ತಲೆಗೆ ಹಾಗೂ ಕಾಲುಗಳಿಗೆ ರಾಡ್‌ನಿಂದ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ನಾಗಪ್ಪ ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮಚ್ಚು-ಲಾಂಗು ಮಾರಕಾಸ್ತ್ರಗಳಿಂದ ಗೋಜಗಾ ಗ್ರಾಮದ ಬಳಿ ನಡು ರಸ್ತೆಯಲ್ಲಿಯೇ ಥಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪರೇಶ್ ಮೇಸ್ತಾ ಟು ಫರಂಗಿಪೇಟೆ- ಸಂಘಪರಿವಾರದ ಪಿತೂರಿ ಬಯಲು!
ನಾವು ಹೇಳಿದ ಹಾಗೆ ನೀವು ಕೆಲಸ ಮಾಡಬೇಕು. ಇಲ್ಲದಿದ್ದರೆ ಲಂಚ ಪಡೆದಿದ್ದೀಯಾ ಎಂಬುದಾಗಿ ಕೇಸ್ ಹಾಕುತ್ತೇವೆ ಎಂದು ಹಲ್ಲೆಕೋರರು ಬೆದರಿಸಿದ್ದಾರೆ ಎಂದು ದೂರಲಾಗಿದೆ.
ಗಾಯಾಳು ನಾಗಪ್ಪ ಅವರನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಕಂಡಕ್ಟರ್ ಮೇಲೆ ಹಲ್ಲೆ ನಡೆಸಲಾಗಿತ್ತು.
