ಮದುವೆ ಸಂಬಂಧಗಳೆಲ್ಲ ರದ್ದಾಗುತ್ತಿವೆ ಎಂದು ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕೆ.ಕೆ.ಕೊಪ್ಪ ಗ್ರಾಮದಲ್ಲಿ ನಡೆದಿದೆ.
ಕೆ.ಕೆ.ಕೊಪ್ಪ ಗ್ರಾಮದ ಸಂತೆ ಬೀದಿಯ ಬಸವರಾಜ ಸೋಮಪ್ಪ ಡೊಂಗರಗಾವಿ ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಮದುವೆ ಮಾಡಿಕೊಳ್ಳಲು ಹುಡುಕುತ್ತಿದ್ದ ಸಂಬಂಧಗಳೆಲ್ಲವೂ ರದ್ದಾಗುತ್ತಿವೆ ಎಂದು ಮನನೊಂದಿದ್ದ ಯುವಕ ತಮ್ಮ ಹೊಲದಲ್ಲಿನ ಬೇವಿನ ಗಿಡದ ಟೊಂಗೆಗೆ ಪ್ಲಾಸ್ಟಿಕ್ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತನ ತಂದೆ ಸೋಮಪ್ಪ ಡೊಂಗರಗಾವಿ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.