ಮಹಿಳೆಯನ್ನು ಕೊಲೆ ಮಾಡಿ ಆಭರಣ ಕದ್ದು ಪರಾರಿ ಆಗಿದ್ದ ಅಪ್ರಾಪ್ತ ಸೇರಿ ಮೂವರನ್ನು ಬೆಳಗಾವಿ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಏ. 22 ರಂದು ಅಂಜನಾ ದಡ್ಡಿಕರ್ ( 52) ಎಂಬುವವರನ್ನು ಬರ್ಬರವಾಗಿ ಹತ್ಯೆ ಮಾಡಿ ಆರೋಪಿಗಳು ಚಿನ್ನಾಭರಣ ಕದ್ದು ಪರಾರಿಯಾಗಿದ್ದರು. ಈ ಕುರಿತು ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಂಜನಾ ಎಂಬ ಮೃತ ಮಹಿಳೆ ನಗರದ ಜ್ಯೋತಿ ಬಾಂದೆಕರ ಎಂಬುವವರಿಗೆ ಹಣ ಕೊಟ್ಟಿದ್ದರು. ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಆರೋಪಿ ಮಹಿಳೆ ಜ್ಯೋತಿ ಬಾಂದೆಕರ ಆಕೆಯ ಪುತ್ರಿ ಸುಹಾನಿ ಬಾಂದೆಕರ್ ಹಾಗೂ ಅಪ್ರಾಪ್ತ ಪುತ್ರನ ಜೊತೆ ಮಹಿಳೆಯನ್ನು ಹತ್ಯೆ ಮಾಡಿ 1.70 ಲಕ್ಷ ಮೌಲ್ಯದ ಆಭರಣ ಕದ್ದು ಪರಾರಿ ಆಗಿದ್ದರು.
ಸಧ್ಯ ಬೆಳಗಾವಿ ನಗರ ಪೊಲೀಸರು ಆರೋಪಿಗಳನ್ನು ಬಂಧಿಸಿ 1.70 ಲಕ್ಷ ಮೌಲ್ಯದ ಆಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.