ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಹಾಡಹಗಲೇ ಚಿನ್ನದ ಅಂಗಡಿಗೆ ದರೋಡೆ ಯತ್ನ ನಡೆದಿದ್ದು, ಕ್ಷಣಮಾತ್ರದಲ್ಲಿ ರೋಚಕ ತಿರುವು ಪಡೆದಿದೆ.
ಪಟ್ಟಣದ ತ್ರಿಮೂರ್ತಿ ಜ್ಯುವೆಲ್ಸ್ ಅಂಗಡಿಗೆ ಇಬ್ಬರು ದುಷ್ಕರ್ಮಿಗಳು ಹೆಲ್ಮೆಟ್ ಹಾಕಿಕೊಂಡು ಬಂದು, ಗನ್ ತೋರಿಸಿ ಚಿನ್ನ ದೋಚಲು ಮುಂದಾಗಿದ್ದರು. ಆದರೆ ಅಂಗಡಿ ಮಾಲೀಕ ಮಹೇಶ್ ಪೋತದಾರ ಅವರು ಧೈರ್ಯ ತೋರಿಸಿ ಜೋರಾಗಿ ಕೂಗಿ ನೆರವು ಕೋರಿದ ಕಾರಣ, ದುಷ್ಕರ್ಮಿಗಳು ಹೆದರಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನೆ ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.