ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ತಾಲೂಕಾ ಘಟಕದ ವತಿಯಿಂದ ಬೆಳಗಾವಿ ಜಿಲ್ಲೆಯ ಗೋಕಾಕಿನ ಜೆ.ಎಸ್.ಎಸ್ ಕಾಲೇಜ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಬಣಜಿಗ ಸಮಾಜದ 18 ನೇ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಮತ್ತು ರಾಜ್ಯಾಧ್ಯಕ್ಷರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ತಾಲ್ಲೂಕು ಘಟಕದಿಂದ ‘ಬಣಜಿಗ’ರ ಜನಗಣತಿ ಕಾರ್ಯ ನಡೆಸಬೇಕು. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ‘ಬಣಜಿಗ’ ಸಮಾಜದ ವಿದ್ಯಾರ್ಥಿಗಳಿಗೆ 2ಎ ಮೀಸಲಾತಿ ಸೌಲಭ್ಯ ನಿರಂತರವಾಗಿ ದೊರೆಯುತ್ತಿದೆ, ಇದು ಸರ್ಕಾರಿ ಸೇವೆಗೂ ವಿಸ್ತರಣೆ ಆಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗೋಕಾಕ ತಾಲೂಕಾ ಘಟಕದ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಶ್ರೀ ಚನ್ನಪ್ಪ ಬಸಪ್ಪ ಕೌಜಲಗಿ, ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ರೂಡಗಿ, ಪ್ರಮುಖರಾದ ಶ್ರೀ ಮಲ್ಲಿಕಾರ್ಜುನ ಸಾವಕಾರ, ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ವಿಶ್ವಸ್ಥ ಮಂಡಳಿ ಸದಸ್ಯರಾದ ಶ್ರೀ ಬಸನಗೌಡ ಶಿ. ಪಾಟೀಲ, ಗೋಕಾಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿಶ್ವನಾಥ ಅಡಿವೆಪ್ಪ ಕಡಕೋಳ, ಗೋಕಾಕ ಶಿಕ್ಷಣ ಸಂಸ್ಥೆಯ ನಿರ್ದೇಶಕರು ಹಾಗೂ ವೈದ್ಯರಾದ ಡಾ. ವೀರಣ್ಣ ಬಿ. ಉಪ್ಪಿನ, ಗೋಕಾಕ ತಾಲೂಕಾ ಘಟಕದ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಮಹಾದೇವಿ ಮೈಲಾರಲಿಂಗ ಉಪ್ಪಿನ, ಯುವ ಘಟಕದ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಶಿವಪುತ್ರಪ್ಪ ಶೆಟ್ಟಿ, ಶ್ರೀಮತಿ ಪೂರ್ಣಿಮಾ ರವೀಂದ್ರ ತಾವಂಶಿ, ಶ್ರೀಮತಿ ಸುಹಾಸಿನಿ ಮುತ್ತುರಾಜ ನಂದಿ, ಕಾರ್ಯಕಾರಿಣಿ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಮಹೇಶ ಈರಣ್ಣ ಪಟ್ಟಣಶೆಟ್ಟಿ, ಶ್ರೀ ಶ್ರೀಕಾಂತ ನಾಗಪ್ಪ ಅರಳಿಮಟ್ಟಿ, ಶ್ರೀ ಸಚಿನ ಅಪ್ಪಸಾಹೇಬ ಖಡಬಡಿ ಹಾಗೂ ಸಂಘದ ಸಮಸ್ತ ಸದಸ್ಯರು ಪಾಲ್ಗೊಂಡಿದ್ದರು.