ಬೆಳಗಾವಿ | ಬರಗೂರು ಎಂದರೆ ಸೌಹಾರ್ದತೆಯ ಪ್ರತಿರೂಪ: ಶಿವಾಜಿ ಕಾಗಣೀಕರ್

Date:

ದೇಶವು ಅಸಮಾನತೆ ಮತ್ತು ಕೋಮು ದ್ವೇಷದತ್ತ ವಾಲುತ್ತಿರುವ ಈ ಸಂದರ್ಭದಲ್ಲಿ ಸೌಹಾರ್ದ ಭಾರತ ಎಂಬ ಗ್ರಂಥದ ಜನಾರ್ಪಣೆ ಕಾಡುತ್ತಿರುವ ರೋಗಕ್ಕೆ ದೊರೆತ ಔಷಧದಂತಿದೆ ಎಂದು ಹಿರಿಯ ಪರಿಸರವಾದಿ ಶಿವಾಜಿ ಕಾಗಣೀಕರ್ ಹೇಳಿದರು.

- Advertisement -

ಬೆಳಗಾವಿ ನಗರದ ಬಸವರಾಜ ಕಟ್ಟೀಮನಿ ಸಭಾಂಗಣದಲ್ಲಿ ಜಿಲ್ಲಾ ಬಂಡಾಯ ಸಾಹಿತ್ಯ ಸಂಘಟನೆ ಹಾಗೂ ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಹಯೋಗದಲ್ಲಿ ಆಯೋಜಿಸಿದ್ದ ಬರಗೂರು ರಾಮಚಂದ್ರಪ್ಪ ಅವರ ಸೌಹಾರ್ದ ಭಾರತ ಕೃತಿ ಜನಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ನಟರಾಜ್ ಹುಳಿಯಾರ್ ಅವರ ‘ಡಾಕ್ಟರ್...

ಇತ್ತೀಚೆಗೆ ಲೋಕಾರ್ಪಣೆಗೊಂಡ ನಟರಾಜ್ ಹುಳಿಯಾರ್ ಅವರ 'ಡಾಕ್ಟರ್ ಸಾಹೇಬ್- ರಾಮಮನೋಹರ ಲೋಹಿಯಾ ಜೀವನಯಾನ' ಕೃತಿಯಿಂದ ಆಯ್ದ 'ಲೋಹಿಯಾ ಮತ್ತು ಕರ್ನಾಟಕ' ಅಧ್ಯಾಯ, ಭಾನುವಾರದ ವಿರಾಮದ ಓದಿಗಾಗಿ... 'ಮಾರ್ಕ್ಸ್, ಗಾಂಧಿ ಅಂಡ್ ಸೋಷಲಿಸಂ' ಪುಸ್ತಕಕ್ಕೆ ಮುನ್ನುಡಿ...

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

ಬರಗೂರು ಎಂದರೆ ಸೌಹಾರ್ದತೆಯ ಪ್ರತಿರೂಪ. ಸಹಮಾನವರಲ್ಲಿ ಸೌಹಾರ್ದತೆ ಇಲ್ಲದಿದ್ದರೆ ದೇಶಕ್ಕೆ ಭವಿಷ್ಯವಿಲ್ಲ. ಇಂತಹ ಸಂದರ್ಭದಲ್ಲಿ ಈ ಕೃತಿ ಸಮಾನತೆ ಹಾಗೂ ಸೌಹಾರ್ದತೆಯನ್ನು ಬೆಳೆಸುವ ಕೈದೀವಿಗೆಯಾಗಿ ಕೆಲಸ ಮಾಡಬಲ್ಲದು ಎಂದರು.

ಪುಸ್ತಕ ಓದುವುದರಲ್ಲೇ ನಿಲ್ಲದೆ ಅದರ ಆಶಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಸಮಾನತೆ ಮತ್ತು ಸೌಹಾರ್ದತೆ ನೆಲೆಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.

ಬಂಡಾಯ ಸಾಹಿತಿ ಯಲ್ಲಪ್ಪ ಹಿಮ್ಮಡಿ ಆಶಯ ನುಡಿಗಳನ್ನಾಡಿ, ಸಾಹಿತಿಗಳು ಸಾಮಾಜಿಕ ಹೊಣೆಗಾರಿಕೆಯಿಂದ ಬರೆಯಬೇಕು. ಜನರಿಂದ ದೂರವಿರುವ ಬರಹಗಾರ ಎಂದಿಗೂ ಬೆಳೆಯಲಾರ. ಜನರ ನೋವಿಗೆ ಮಿಡಿಯುವ ಬರಹಗಾರರು ಮಾತ್ರ ಸಮಾಜಕ್ಕೆ ದಿಕ್ಕು ತೋರಬಲ್ಲರು. ಅದಕ್ಕಾಗಿಯೇ ಬರಗೂರು ಅವರು ಪುಸ್ತಕ ಬಿಡುಗಡೆಯನ್ನು ಜನಾರ್ಪಣೆ ಎಂದು ಕರೆಯುತ್ತಾರೆ ಎಂದು ಹೇಳಿದರು.

ಕವಯಿತ್ರಿ ಕವಿತಾ ಕುಸುಗಲ್ ಕೃತಿ ಪರಿಚಯ ಮಾಡಿದರು. ಹಿರಿಯ ಸಾಹಿತಿ ಸರಜೂ ಕಾಟ್ಕರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಲಿಂಗತ್ವ ಅಲ್ಪಸಂಖ್ಯಾತರ ಮುಖ್ಯಸ್ಥೆ ಚಿನ್ನು ತಳವಾರ್, ಜಮಾತೆ ಇಸ್ಲಾಮಿ ಹಿಂದ್‌ನ ಮೊಹಮ್ಮದ್ ಯಾಸಿನ್ ಮುಕಾನ್ದಾರ್, ದಲಿತ ಸಂಘಟನೆಯ ಸಿದ್ದಪ್ಪ ಕಾಂಬಳೆ, ಕನ್ನಡ ಚಳುವಳಿಯ ಅಶೋಕ ಚಂದರಗಿ, ರೈತ ಚಳುವಳಿಯ ಸಿದಗೌಡ ಮೋದಗಿ, ಸಿಐಟಿಯು ಸಂಘಟನೆಯ ಮೀನಾಕ್ಷಿ ದಫಡೆ, ಲೇಖಕಿಯರ ಸಂಘದ ಕೆ.ಆರ್. ಸಿದ್ದಗಂಗಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಆರಂಭದಲ್ಲಿ ಸರಳಾ ಸಾತ್ಪುತೆ ಸೌಹಾರ್ದ ಗೀತೆಗಳನ್ನು ಹಾಡಿದರು. ರವಿ ಕೋಟಾರಗಸ್ತಿ ಸ್ವಾಗತಿಸಿದರು. ನದೀಮ್ ಸನದಿ ವಂದಿಸಿದರು.

IMG 20251111 WA0000
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ | ರೈತರ ಬೇಡಿಕೆ ಈಡೇರದಿದ್ದರೆ ಹೋರಾಟದ ಸ್ವರೂಪ ಬದಲು: ಚೂನಪ್ಪ ಪೂಜಾರಿ

ಕಬ್ಬಿಗೆ ಸೂಕ್ತ ದರ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ...

ಬೆಳಗಾವಿ | ರೈತರ ಹೋರಾಟಕ್ಕೆ ಎರಡು ಮೂರು ದಿನಗಳಲ್ಲಿ ಶುಭಸುದ್ದಿ: ಜಿಲ್ಲಾಧಿಕಾರಿ ಭರವಸೆ

ಕಬ್ಬಿಗೆ ಸೂಕ್ತ ದರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಾದಯಾತ್ರೆ...

ಬೆಳಗಾವಿ | ಕೇಂದ್ರ ಸರ್ಕಾರ ಸ್ಪಂದಿಸದಿದ್ದರೆ ಅ.17ರಿಂದ ಗುರ್ಲಾಪುರ ಕ್ರಾಸ್ ಬಂದ್ ಎಚ್ಚರಿಕೆ: ಶಶಿಕಾಂತ ಗುರೂಜಿ

ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಗುರ್ಲಾಪುರ ಕ್ರಾಸ್‌ನಲ್ಲಿ ರೈತರು ನಡೆಸುತ್ತಿರುವ...