ಬೆಳಗಾವಿ ನಗರದಲ್ಲಿ ಬಸವ ಜಯಂತಿ ಆಚರಣೆ ನಿರ್ಧರಿಸಿದ್ದೇವೆ. ಇದರ ಅಂಗವಾಗಿ ಏಪ್ರಿಲ್ 27ರಂದು ಬೃಹತ್ ಬೈಕ್ ರ್ಯಾಲಿ, ಮೇ 4ರಂದು ಮೆರವಣಿಗೆ ಆಯೋಜಿಸಲಾಗಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ ತಿಳಿಸಿದ್ದಾರೆ
ಬೆಳಗಾವಿ ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜಾಗತಿಕ ಲಿಂಗಾಯತ ಮಹಾಸಭೆ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ, ರಾಷ್ಟ್ರೀಯ ಬಸವ ದಳ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಏಪ್ರಿಲ್ 30ರಂದು ಎಲ್ಲ ಸಂಘ-ಸಂಸ್ಥೆಗಳು ಮತ್ತು ಮನೆಗಳಲ್ಲಿ ಬಸವ ಜಯಂತಿ ಆಚರಿಸಲಾಗುವುದು’ ಎಂದರು.
‘ಏಪ್ರಿಲ್ 27ರಂದು ಬೆಳಿಗ್ಗೆ 8ಕ್ಕೆ ಬಸವೇಶ್ವರ ವೃತ್ತದಿಂದ ಬೈಕ್ ಬ್ಯಾಲಿ ಆರಂಭಗೊಳ್ಳಲಿದೆ. ಟಿಳಕವಾಡಿಯ ಆರ್‌ಪಿಡಿ ಕಾಲೇಜು ವೃತ್ತ, ವಡಗಾವಿ, ಖಾಸಬಾಗ, ಶಹಾಪುರ, ಕಪಿಲೇಶ್ವರ ರೈಲ್ವೆ ಮೇಲ್ವೇತುವೆ, ರವಿವಾರ ಪೇಟೆ, ಮಾರುತಿ ಗಲ್ಲಿ, ರಾಮದೇವ ಗಲ್ಲಿ, ರಾಣಿ ಚನ್ನಮ್ಮ ವೃತ್ತ, ಶಿವಬಸವ ನಗರ, ಮಹಾಂತೇಶ ನಗರ, ಶ್ರೀ ನಗರ, ಆಂಜನೇಯ ನಗರ ಮಾರ್ಗವಾಗಿ ಸಾಗಿ ರಾಮತೀರ್ಥ ನಗರ ತಲುಪಲಿರುವ ಪ್ಯಾಲಿಯಲ್ಲಿ ಒಂದು ಸಾವಿರಕ್ಕೂ ಅಧಿಕ ಬೈಕ್ ಸವಾರರು ಪಾಲ್ಗೊಳ್ಳುವ ನಿರೀಕ್ಷೆ ಇದೆ’ ಎಂದು ತಿಳಿಸಿದರು.