ಬೆಳಗಾವಿಯ ಕೆಎಸ್ಆರ್.ಟಿಸಿ ಬಸ್ ಕಂಡಕ್ಟರ್ ಮರಾಠಿ ಬರಲ್ಲ ಎಂದಿದ್ದಕ್ಕೆ ಮೇಲೆ 25 ಕ್ಕೂ ಹೆಚ್ಚು ಜನ ಹಲ್ಲೆ ನಡೆಸಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು ಬೆಳಗಾವಿ ಮಹಾರಾಷ್ಟ್ರ ನಡುವಿನ ಬಸ್ ಸಂಚಾರ್ ಬಂದ್ ಮಾಡಲಾಗಿದೆ.
ಕಂಡಕ್ಟರ್ ಮೇಲೆ ಹಲ್ಲೆ ಖಂಡಿಸಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಸದ್ಯ ಬೆಳಗಾವಿ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಸಾರಿಗೆ ಬಸ್ ಸಂಚಾರವನ್ನು ಮಹಾರಾಷ್ಟ್ರ ಸರ್ಕಾರ ಸ್ಥಗಿತಗೊಳಿಸಿದೆ ಹಾಗೂ ಪೊಲೀಸರ ಸೂಚನೆಯ ಮೇರೆಗೆ ಮಹಾರಾಷ್ಟ್ರಕ್ಕೆ ಬಸ್ ಸೇವೆಗಳನ್ನು ನಿಲ್ಲಿಸಲಾಗಿದೆ ಎಂದು NWKRTC ವಿಭಾಗೀಯ ನಿಯಂತ್ರಕ, ಬೆಳಗಾವಿ ರಾಜೇಶ್ ಹುದ್ದಾರ ಹೇಳಿದ್ದಾರೆ.