ಬೆಳಗಾವಿ ನಗರದ ಮಜಗಾವಿ ಕ್ರಾಸ್‌ನಲ್ಲಿ ಶಸ್ತ್ರಾಸ್ತ್ರ ಸಾಗಾಟದಲ್ಲಿ ತೊಡಗಿದ್ದ ಮಜಗಾವಿಯ ವಾಲ್ಮೀಕಿ ಗಲ್ಲಿಯ ಮಂಜು ಸಿತಿಮಣಿ (27) ಎಂಬಾತನನ್ನು ಉದ್ಯಮಬಾಗ್ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಆರೋಪಿಯಿಂದ ಇನ್ನೋವಾ ಕಾರು, ಅದರೊಳಗಿದ್ದ ಖಡ್ಗ ಮತ್ತು ಕೊಡಲಿಯನ್ನು ವಶಪಡಿಸಿಕೊಳ್ಳಲಾಗಿದೆ.
ಇನ್ನೊಂದು ಪ್ರಕರಣದಲ್ಲಿ, ಸಾಂಬ್ರಾ ಕೆಳಸೇತುವೆ ಬಳಿ ಸಂಚರಿಸುತ್ತಿದ್ದ ಹೊಸ ಗಾಂಧಿ ನಗರದ ಅಪ್ಪಾರ ಶೇಖ್ (42) ಎಂಬಾತನನ್ನು ಮಾಳಮಾರುತಿ ಠಾಣೆಯ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಈತನಿಂದ ದ್ವಿಚಕ್ರ ವಾಹನ ಹಾಗೂ ಅದರ ಲಾಕರ್‌ನಲ್ಲಿದ್ದ ಶಸ್ತ್ರಾಸ್ತ್ರವನ್ನು ವಶಪಡಿಸಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಶಾಹೂನಗರದ ಕೆರೆ ಬಳಿ ರೌಡಿಶೀಟರ್ ರಾಹುಲ್ ಜಾಧವ ಎಂಬಾತನನ್ನು ಎಪಿಎಂಸಿ ಠಾಣೆಯ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಬಂಧಿತನಿಂದ 2.20 ಗ್ರಾಂ ಹೆರಾಯಿನ್ ಹೊಂದಿರುವ 24 ಪ್ಯಾಕೆಟ್‌ಗಳೊಂದಿಗೆ ದ್ವಿಚಕ್ರ ವಾಹನವನ್ನೂ ವಶಪಡಿಸಿಕೊಂಡಿದ್ದಾರೆ.