ಬೆಳಗಾವಿ ನಗರದಲ್ಲಿ ಐಪಿಎಲ್ ಟೂರ್ನಮೆಂಟ್ ನಲ್ಲಿ ಭರ್ಜರಿ ಬೆಟ್ಟಿಂಗ್ ನಡೆಸಿದ್ದ ಜಾಲವನ್ನು ಬೆಳಗಾವಿ ಮಹಾನಗರದ ಸೈಬರ್ ಕ್ರೈಮ್ (CEN) ಪೋಲೀಸರು ಪತ್ತೆ ಮಾಡಿ ಮುಖ್ಯ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
ಐಪಿಎಲ್ ಮ್ಯಾಚಗಳಲ್ಲಿ ಲಕ್ಷಾಂತರ ರೂ ಗಳ ಬೆಟ್ಟಿಂಗ್ ವ್ಯವಹಾರ ನಡೆಸಿದ್ದ ಅಡ್ಡೆಯ ಮೇಲೆ ಸಿಇಎನ್ ಪೋಲೀಸರು ಸಿಪಿಐ ಗಡೇಕರ್ ನೇತ್ರತ್ವದಲ್ಲಿ ದಾಳಿ ಮಾಡಿ ಉದ್ದವ ಜಯರಾಮದಾಸ್ ರೋಚಲಾನಿ( 61) ಎಂಬಾತನನ್ನು ಅರೆಸ್ಟ್ ಮಾಡಲಾಗಿದ್ದು ಕರಣ್ ರೋಚಲಾನಿ ಎಂಬಾತ ಪರಾರಿಯಾಗಿದ್ದಾನೆ.
ಬಂಧಿತ ಉದ್ದವ ಜಯರಾಮದಾಸ ರೋಚಲಾನಿ ಬೆಟ್ಟಿಂಗ್ ಮುಖ್ಯ ಆರೋಪಿಯಾಗಿದ್ದು ಈತನು ದಂಧೆಗೆ ಬಳಿಸುತ್ತಿದ್ದ 12 ಮೋಬೈಲ್, ಬೇಸಿಕ್ ಹ್ಯಾಂಡಸೆಟ್ 13 ಹಾಟ್ ಲೈನ್ ವಿಡಿಯೋ ಮಿಕ್ಸರ್ 1, ಟಿವಿ 1 ಹಾಗು ಎರಡು ಲಕ್ಷ ರೂಗಳನ್ನು ವಶಪಡಿಸಿಕೊಂಡಿದ್ದಾರೆ.
ಉಳಿದ ಆರೋಪಿಗಳ ಪತ್ತೆಗಾಗಿ ಸೈಬರ್ ಕ್ರೈಂ ಪೋಲಿಸರು ಕಾರ್ಯಚರಣೆ ಮುಂದೆವರಿಸಿದ್ದಾರೆ.