ಸೊಸೆ, ಅತ್ತೆಯ ನಡುವೆ ಜೊತೆ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿ ಅತ್ತೆಯ ಮೇಲೆ ಕುಡುಗೋಲಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಜಾನವ್ವ ಹುದಲಿ (80) ಹಲ್ಲೆಗೊಳಗಾದ ಅತ್ತೆ ಎಂದು ಗುರುತಿಸಲಾಗಿದ್ದು, ಹಲ್ಲೆಗೂ ಮುನ್ನ ತನ್ನ ಪತಿ ನಾಗರಾಜ್ ಬುಧವಾರ ರಾತ್ರಿ ಬೆಳಗಾವಿ ತಾಲೂಕಿನ ಮಾವಿನಕಟ್ಟಿಯಲ್ಲಿರುವ ತನ್ನ ತಾಯಿ ಮನೆಗೆ ಊಟಕ್ಕೆ ಹೋಗಿದ್ದ ಕಾರಣ ಪತ್ನಿ ಶಿಲ್ಪಾ ಸಿಟ್ಟಾಗಿ ಪತಿಯ ಜೊತೆ ಗಲಾಟೆ ಮಾಡಿದ್ದು ನಂತರ ಅತ್ತೆ ಜಾನವ್ವ ಗಂಡ ಹೆಂಡತಿಯ ಜಗಳದಲ್ಲಿ ಮೂಗುತೂರಿಸಿದ್ದಾರೆ, ಇದರಿಂದ ಇನ್ನಷ್ಟು ಸಿಟ್ಟಾದ ಶಿಲ್ಪಾ ಕೈಗೆ ಸಿಕ್ಕ ಕುಡುಗೋಲಿನಿಂದ ಹಲ್ಲೆ ನಡೆಸಿದ್ದಾಳೆ. ಕಳೆದ ಕೆಲ ವರ್ಷಗಳಿಂದ ಅತ್ತೆ ಸೊಸೆ ನಡುವಿನ ಗಲಾಟೆಯಿಂದಾಗಿ ಸಾಕಷ್ಟು ಬಾರಿ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದ್ದರು. ಆದರೆ ಈ ಬಾರಿ ಗಲಾಟೆ ಹಲ್ಲೆಯ ಮಟ್ಟಕ್ಕೆ ತಿರುಗಿದ್ದು, ಕೂಡಲೇ ಜಾನವ್ವನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತ್ನಿ ಶಿಲ್ಪಾ ವಿರುದ್ಧ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.