ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಶ್ರೀ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಖಾನಪೇಟ ನಿರ್ದೇಶಕರ ಚುನಾವಣೆಯಲ್ಲಿ ಮಹಾದೇವಪ್ಪ ಯಾದವಾಡ ಪೆನೆಲ್ ಭರ್ಜರಿ ಗೆಲುವು ಸಾಧಿಸಿದೆ. ಒಟ್ಟು 18 ಸ್ಥಾನಗಳಲ್ಲಿ 11 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿದಿದೆ. (ಹಿರೆರಡ್ಡಿ) ರೈತ ರಕ್ಷಣಾ ಸಮಿತಿಯು 7 ಸ್ಥಾನಗಳನ್ನು ಗೆದ್ದಿದೆ.
ಒಟ್ಟು 19,423 ಮತದಾರರಲ್ಲಿ 12,056 ಮಂದಿ ಮತದಾನ ಮಾಡಿ 62.7% ಮತದಾನ ದಾಖಲಾಗಿದೆ. ಇದರಲ್ಲಿ ಪುರುಷರು 10,720 ಮತ ಹಾಗೂ ಮಹಿಳೆಯರು 1,336 ಮತ ಚಲಾಯಿಸಿದ್ದಾರೆ.
ಸಾಮಾನ್ಯ “ಅ” ವರ್ಗದ ಕಬ್ಬು ಬೆಳೆಗಾರರ ಮತಕ್ಷೇತ್ರದಿಂದ ಆಯ್ಕೆಯಾದವರು
ಈರಪ್ಪ ಶಿವಗೆನಪ್ಪ ಹರನಟ್ಟಿ 4272 ಮತಗಳು
ಗೋಪಾಲರಡ್ಡಿ ರಾಮಪ್ಪ ಚಿಕರಡ್ಡಿ 4132 ಮತಗಳು
ಪರತಗೌಡ ಪಾಟೀಲ 4129 ಮತಗಳು
ಪರಪ್ಪಗೌಡ ಪಾಟೀಲ್ 4807 ಮತಗಳು
ಬಸವರಾಜ ಬಸವಂತಪ್ಪ ಹಿರೇರಡ್ಡಿ 4377 ಮತಗಳು
ಬಸವರಾಜ ತುಪ್ಪದ 4160 ಮತಗಳು
ಭೀಮಪ್ಪ ಶಿವಪ್ಪ ಬೆಳವಣಕಿ 4141 ಮತಗಳು
ಮಲ್ಲಪ್ಪ ಶಿವಲಿಂಗಪ್ಪ ಯಾದವಾಡ 4874 ಮತಗಳು
ಮಹಾದೇವಪ್ಪ ಶಿವಲಿಂಗಪ್ಪ ಯಾದವಾಡ 5003 ಮತಗಳು (ಅತೀ ಹೆಚ್ಚು ಮತ ಪಡೆದ ಅಭ್ಯರ್ಥಿ)
ಮಹಾದೇವ ಆತಾರ 4061 ಮತಗಳು
ಮಹಿಳಾ ಮೀಸಲು “ಅ” ವರ್ಗದಿಂದ ಗೆದ್ದ ಅಭ್ಯರ್ಥಿಗಳು
ಅನ್ನಪೂರ್ಣ ಪಾಟೀಲ್ 3953 ಮತಗಳು
ಶಶಿಕಲಾ ಬಸವರಾಜ ಸೋಮಗೊಂಡ 4177 ಮತಗಳು
ಪರಿಶಿಷ್ಟ ಜಾತಿ ಮೀಸಲು “ಅ” ವರ್ಗ ಮತಕ್ಷೇತ್ರದಿಂದ ಗೆಲುವು ಸಾಧಿಸಿದ ಅಭ್ಯರ್ಥಿಗಳು
ಚಂದ್ರು ರಜಪೂತ 3917 ಮತಗಳು
ಪರಿಶಿಷ್ಟ ಪಂಗಡ ಮೀಸಲು “ಅ” ವರ್ಗ ಮತಕ್ಷೇತ್ರದಿಂದ ಗೆಲುವು ಸಾಧಿಸಿದ ಅಭ್ಯರ್ಥಿಗಳು ಅಭ್ಯರ್ಥಿಗಳು
ಭೀಮಪ್ಪ ಬಸಿಡೋಣಿ 4137 ಮತಗಳು
ಹಿಂದುಳಿದ “ಅ” ವರ್ಗದ ಮತಕ್ಷೇತ್ರದಿಂದ ಗೆಲುವು ಸಾಧಿಸಿದ ಅಭ್ಯರ್ಥಿ
ಈರಣ್ಣ ಕಾಮಣ್ಣವರ 4157 ಮತಗಳು
ಹಿಂದುಳಿದ “ಬ” ವರ್ಗ ಮತಕ್ಷೇತ್ರದಿಂದ ಗೆಲುವು ಸಾಧಿಸಿದ ಅಭ್ಯರ್ಥಿಗಳು
ಶಿವಾನಂದ ಮುಷ್ಟಿಗೇರಿ 4863 ಮತಗಳು
“ಬ” ವರ್ಗ ಸಹಕಾರ ಸಂಸ್ಥೆಗಳ ಪ್ರತಿನಿಧಿ ಮತಕ್ಷೇತ್ರದಿಂದ ಗೆಲುವು ಸಾಧಿಸಿದ ಅಭ್ಯರ್ಥಿ
ಬಸವನಗೌಡ ದ್ಯಾಮನಗೌಡ್ರ 40 ಮತಗಳಿಂದ ಗೆಲುವು
“ಡ” ವರ್ಗ ಕಬ್ಬು ಬೆಳೆಗಾರನಲ್ಲದ ಮತಕ್ಷೇತ್ರದಿಂದ ಗೆಲುವು ಸಾಧಿಸಿದ ಅಭ್ಯರ್ಥಿ
ಬಸಪ್ಪ ಸಿದರಡ್ಡಿ (ಕೇವಲ 1 ಮತ) ಅಂತರದಲ್ಲಿ 73 ಮತಗಳಿಂದ
ಮಹಾದೇವಪ್ಪ ಯಾದವಾಡ ಪೆನೆಲ್:
ಮಹಾದೇವಪ್ಪ ಯಾದವಾಡ, ಮಲ್ಲಣ್ಣ ಯಾದವಾಡ, ಈರಪ್ಪ ಹರನಟ್ಟಿ, ಬಸವರಾಜ ತುಪ್ಪದ, ಭೀಮಪ್ಪ ಬೆಳವಣಕಿ, ಮಹಾದೇವ ಆತಾರ, ಶಶಿಕಲಾ ಸೋಮಗೊಂಡ, ಅನ್ನಪೂರ್ಣ ಪಾಟೀಲ್, ಶಿವಾನಂದ ಮುಷ್ಟಿಗೇರಿ, ಚಂದ್ರು ರಜಪೂತ, ಬಸವನಗೌಡ ಪಾಟೀಲ.
ರೈತ ಹಿತರಕ್ಷಣಾ ಸಮಿತಿ (ಹಿರೆರಡ್ಡಿ) ಪೆನೆಲ್:
ಬಸವರಾಜ ಹಿರೆರಡ್ಡಿ, ಗೋಪಾಲರಡ್ಡಿ ಚಿಕರಡ್ಡಿ, ಪರಪ್ಪಗೌಡ ಪಾಟೀಲ್, ಪರತಗೌಡ ಪಾಟೀಲ್, ಈರಣ್ಣ ಕಾಮಣ್ಣವರ, ಭೀಮಪ್ಪ ಬಸಿಡೋಣಿ, ಬಸಪ್ಪ ಸಿದರಡ್ಡಿ.
ಚುನಾವಣೆಯ ವೇಳೆ ವಿರೋಧಿಗಳು ಮಾಡಿದ ಆರೋಪಗಳಿಗೆ ಮಹಾದೇವಪ್ಪ ಯಾದವಾಡ ಪೆನೆಲ್ ಭರ್ಜರಿ ಗೆಲುವಿನ ಮೂಲಕ ತಿರುಗೇಟು ನೀಡಿದೆ.