ಬೆಳಗಾವಿ | ನವಜಾತ ಶಿಶುವಿನ ಹೊಟ್ಟೆಯಲ್ಲಿದ್ದ ಭ್ರೂಣವನ್ನು ಹೊರತೆಗೆದ ವೈದ್ಯರು

Date:

Advertisements

ನವಜಾತ ಶಿಶುವಿನ ಹೊಟ್ಟೆಯಲ್ಲೇ ಬೆಳೆದಿದ್ದ ಮತ್ತೊಂದು ಭ್ರೂಣವನ್ನು ಬೆಳಗಾವಿ ನಗರದ ಕೆಎಲ್‌ಇ ಆಸ್ಪತ್ರೆಯ ವೈದ್ಯರು ಶಸ್ತ್ರ ಚಿಕೆತ್ಸೆಯ ಮೂಲಕ ಹೊರತೆಗೆಯುವಲ್ಲಿ ಯಶಸ್ವಿಯಾಗಿ ಆಗಿದ್ದಾರೆ.

ಮಹಾರಾಷ್ಟ್ರದ ಚಂದಗಡದ ಏಳು ತಿಂಗಳ ಗರ್ಭಿಣಿಯನ್ನು ಡಾ. ಸಂಜಯ ಶಾನಬಾಗ ಅವರು ತಪಾಸಣೆಗೊಳಪಡಿಸಿದಾಗ ಭ್ರೂಣದಲ್ಲಿ ಮೊದಲು ಚೀಲದಂತೆ ಕಂಡಿತು. ನಂತರ ಪರಿಕ್ಷಿಸದಾಗ ಭ್ರೂಣದೊಳಗೆ ಮತ್ತೊಂದು ಭ್ರೂಣವು ಬೆಳೆಯುತ್ತಿರುವದು ಕಂಡು ಬಂದಿದ್ದು. 37 ವಾರಗಳ ನಂತರ ಮಹಿಳೆಯು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನಂತರದ ಡಾ.ಶಾನಬಾಗ ಅವರು ಮಗುವನ್ನು ಸ್ಥಳೀಯ ವೈದ್ಯರು ಬೆಳಗಾವಿಯ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರಕ್ಕೆ ಕಳಹಿಸಿಕೊಟ್ಟದ್ದಾರೆ. ಕೆಎಲ್ಇ ವೈದ್ಯರು ಎರಡು ದಿನದ ನವಜಾತ ಶಿಶುವನ್ನು ತಪಾಸಣೆಗೊಳಪಡಿಸಿ ಶಸ್ತ್ರಚಿಕಿತ್ಸೆಯ ಮೂಲಕ ಹೊಟ್ಟೆಯೊಳಗಿರುವ ಭ್ರೂಣವನ್ನು ಹೊರತೆಗೆದಿದ್ದಾರೆ.

ಅವಳಿ ಆಮ್ಮಿಯೋಟಿಕ್ ಚೀಲವು ಪ್ರಮುಖ ನಾಳಗಳಾದ ಐವಿಸಿ, ಬಲ ಬದಿಯ ಮೂತ್ರಪಿಂಡ ನಾಳ ಹಾಗೂ ಮಹಾಪಧಮನಿಯ ಮಧ್ಯದಲ್ಲಿ ಬೆಳೆಯುತ್ತಿತ್ತು. ಕ್ಲಿಷ್ಟಕರವಾಗಿದ್ದ ಈ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿ ಮಗುವನ್ನು ಪ್ರಾಣಾಪಾಯದಿಂದ ಪಾರು ಮಾಡುವದು ಅತ್ಯಂತ ಸವಾಲಿನ ಕೆಲಸವಾಗಿತ್ತು. ಗರ್ಭಧಾರಣೆಯ ಪ್ರಥಮದಲ್ಲಿ ಕೆಲವು ವಾರ ಇನ್ನೊಂದು ಭ್ರೂಣವು ಸುತ್ತುವರೆದು ಅದು ಮರೆಯಾಗುತ್ತದೆ. ನಂತರ ಈ ರೀತಿಯಾಗಬಹುದು. ಆದರೆ ಅವಳಿಯ ರಕ್ತ ಪೂರೈಕೆಯನ್ನು ಅವಲಂಬಿಸಿ ಭ್ರೂಣದ ಗಾತ್ರ ಹೆಚ್ಚುತ್ತಲಿರುತ್ತದೆ. ಸುಮಾರು ಆರು ಲಕ್ಷ ಗರ್ಭಿಣಿಯರ ಪೈಕಿ ಒಬ್ಬರಲ್ಲಿ ಭ್ರೂಣದೊಳಗೆ ಮತ್ತೊಂದು ಭ್ರೂಣವು ಬೆಳೆಯುವದು ಕಂಡು ಬರುತ್ತದೆ. ಆದರೆ ಇದಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ ಎಂದು ಚಿಕ್ಕಮಕ್ಕಳ ಶಸ್ತ್ರಚಿಕಿತ್ಸೆಯ ವೈದ್ಯರಾದ ಡಾ. ಸ್ವಪ್ಪಿಲ ಪಟ್ಟಣಶೆಟ್ಟಿ ಅವರು ತಿಳಿಸಿದ್ದಾರೆ.

Advertisements

ಡಾ. ಸ್ವಪ್ಟಿಲ್ ಪಟ್ಟಣಶೆಟ್ಟಿ ಅವರಿಗೆ ಡಾ. ಸಕ್ಷಮ, ಅರಿವಳಿಕೆ ತಜ್ಞವೈದ್ಯರಾದ ಡಾ. ರಾಜೇಶ್ ಮಾನೆ ಮತ್ತು ಡಾ. ಪ್ರಿಯಾಂಕಾ ಅವರು ಶಸ್ತ್ರಚಿಕಿತ್ಸೆಗೆ ಸಹಕರಿಸಿದ್ದಾರೆ ಹಾಗೂ ತೀವ್ರ ನಿಗಾ ಘಟಕದಲ್ಲಿ ಡಾ. ಮನೀಷಾ ಭಂಡನಕರ ಹಾಗೂ ಡಾ. ರಾಮ್ ಭಟ್ ಅವರು ಆರೈಕೆ ಮಾಡಿದ್ದು. ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೈಕ್ ಮತ್ತು ಬಸ್ ನಡುವೆ ಅಪಘಾತ ಗರ್ಭಿಣಿ ಸಾವು

ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ನವಿಪೇಠ ರಸ್ತೆಯಲ್ಲಿ ಬಸ್ ಮತ್ತು ಬೈಕ್...

ಬೆಳಗಾವಿ : ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ಬುಧವಾರ ರಜೆ

ಬೆಳಗಾವಿ ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ನಾಳೆ ಬುಧವಾರ...

ಬೆಳಗಾವಿ : ಹಾಸ್ಟೆಲ್‌ನಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ

ಬೆಳಗಾವಿಯ ಬಿಮ್ಸ್ ಆವರಣದಲ್ಲಿರುವ ಹಾಸ್ಟೆಲ್‌ನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

Download Eedina App Android / iOS

X