ಬೆಳಗಾವಿ : ರೈತನಿಂದ ಲಂಚ ಪಡೆದ ಪ್ರಕರಣ ಹೆಸ್ಕಾಂ ಎಂಜಿನಿಯರ್ ಅಮಾನತು

Date:

Advertisements

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಹೆಸ್ಕಾಂ ಉಗಾರ ಖುರ್ದ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ದುರ್ಯೋಧನ ಮಾಳಿ ಲಂಚ ಸ್ವೀಕರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ, ರೈತರಿಂದ ₹3 ಸಾವಿರ ಲಂಚ ಪಡೆದು, ಟೇಬಲ್ ಮೇಲೆ ಹಣ ಎಣಿಸಿ ಜೇಬಿಗೆ ಹಾಕಿಕೊಳ್ಳುತ್ತಿರುವುದು ಸ್ಪಷ್ಟವಾಗಿ ಕಾಣಿಸಿಕೊಂಡಿದೆ. ಜೊತೆಗೆ “ನಿಮ್ಮ ಕೆಲಸ ತಕ್ಷಣ ಮಾಡಿಸುತ್ತೇನೆ” ಎಂದು ಹೇಳುತ್ತಿರುವುದೂ ದಾಖಲಾಗಿದೆ.

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ (ಹೆಸ್ಕಾಂ) ತಕ್ಷಣ ಕ್ರಮಕ್ಕೆ ಇಳಿದು, ಸೋಮವಾರವೇ ದುರ್ಯೋಧನ ಮಾಳಿ ಅವರನ್ನು ಅಮಾನತು ಮಾಡಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಹೆಸ್ಕಾಂ ಜಿಲ್ಲಾ ಇನ್‌ಚಾರ್ಜ್ ಚೀಫ್ ಪ್ರವೀಣಕುಮಾರ ಚಿಕ್ಕಾಡೆ, “ಭಾನುವಾರ ವಿಡಿಯೋ ನಮ್ಮ ಗಮನಕ್ಕೆ ಬಂದಿತ್ತು. ಸೋಮವಾರವೇ ಅಮಾನತು ಆದೇಶ ಹೊರಡಿಸಲಾಗಿದೆ” ಎಂದು ತಿಳಿಸಿದ್ದಾರೆ.

ee dina logo with tagline copy
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ : ಜಾರಕಿಹೊಳಿ ಸಹೋದರರಿಂದ ಹುಕ್ಕೇರಿಯಲ್ಲಿ ಮದ್ಯ–ಮಾಂಸ ಬಾಡೂಟ : ರಮೇಶ ಕತ್ತಿ ಆರೋಪ

ಬೆಳಗಾವಿ ಜಿಲ್ಲೆಯ ಸಹಕಾರಿ ಸಂಘಗಳ ಚುನಾವಣಾ ಹಿನ್ನಲೆಯಲ್ಲಿ ಹುಕ್ಕೇರಿ ತಾಲೂಕಿನ ಹಲವು...

ಬೆಳಗಾವಿ : ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬದಲಾವಣೆ ಪ್ರಿಂಟ್ ಮಿಸ್ಟೇಕ್ ? : ಶಾಸಕ ರಾಜು ಕಾಗೆ

ಬೆಳಗಾವಿ ಜಿಲ್ಲೆಯ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ಶಾಸಕ ರಾಜು ಕಾಗೆ...

ಬೆಳಗಾವಿ : ಸಭೆಯಲ್ಲಿ ಕಣ್ಣೀರು ಹಾಕಿದ ಮಾಜಿ ಸಂಸದ ರಮೇಶ ಕತ್ತಿ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ದಿವಂಗತ ಮಾಜಿ ಸಚಿವ...

ಬೆಳಗಾವಿ : ನಗರದಲ್ಲಿ ರೈತರ ಪ್ರತಿಭಟನೆ ಎಫ್‌ಐಆರ್ ದಾಖಲು

ಜೈ ಕಿಸಾನ್ ತರಕಾರಿ ಮಾರುಕಟ್ಟೆ ಓಪನ್ ಮಾಡುವಂತೆ ಆಗ್ರಹಿಸಿ ಚೆನ್ನಮ್ಮ ವೃತ್ತದಲ್ಲಿ...

Download Eedina App Android / iOS

X