ಬೆಳಗಾವಿ ಜಿಲ್ಲೆಯ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ಭಾರೀ ಪ್ರಮಾಣದ ಮತದಾನ ದಾಖಲಾಗಿದೆ. ಒಟ್ಟು 60,046 ಮತದಾರರಲ್ಲಿ 41,050 ಮಂದಿ ಮತ ಚಲಾಯಿಸಿದ್ದು, ಶೇ. 68.37 ರಷ್ಟು ಮತದಾನವಾಗಿದೆ.
ಈ ಚುನಾವಣೆಯು ಕಳೆದ ಕೆಲ ದಿನಗಳಿಂದ ಮಾಜಿ ಸಂಸದ ರಮೇಶ್ ಕತ್ತಿ ಹಾಗೂ ಸಚಿವ ಸತೀಶ ಜಾರಕಿಹೊಳಿ ಸಹೋದರರ ನಡುವಿನ ಆರೋಪ ಪ್ರತ್ಯಾರೋಪಗಳಿಂದ ಸುದ್ದಿಯಲ್ಲಿತ್ತು. ಒಟ್ಟು 32 ಮಂದಿ ಅಭ್ಯರ್ಥಿಗಳ ಭವಿಷ್ಯ ತೀರ್ಮಾನವಾಗಲಿದ್ದು, ಫಲಿತಾಂಶ ಇಂದು ರಾತ್ರಿ ಪ್ರಕಟವಾಗಲಿದೆ.
ಎರಡು ಪ್ರಮುಖ ಬಣಗಳ ನಡುವೆ ತೀವ್ರ ಪೈಪೋಟಿ ನಡೆದಿದ್ದರಿಂದ ಮತದಾನಕ್ಕೂ ಹೆಚ್ಚಿನ ಕುತೂಹಲ ಉಂಟಾಗಿತ್ತು. ಕೆಲವು ಸಂದರ್ಭಗಳಲ್ಲಿ ವೈಯಕ್ತಿಕ ಟೀಕೆ–ಟಿಪ್ಪಣಿಗಳು ಕೇಳಿಬಂದರೂ ಮತದಾನ ಶಾಂತಿಯುತವಾಗಿ ಮುಗಿದಿದೆ.
ಜನಾಭಿಪ್ರಾಯವೆಂದರೆ
ಯಾರು ಗೆದ್ದರೂ ಜನರಿಗೆ ಒಳ್ಳೆಯ ಕೆಲಸ ಮಾಡಲಿ ಎನ್ನುವುದಾಗಿದೆ.