ಪತ್ನಿಯ ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ನಗರದ ಅನಗೋಳದ ದುರ್ಗಾ ಕಾಲೋನಿಯಲ್ಲಿ ನಡೆದಿದೆ.ಸುನೀಲ್ ಮೂಲಿಮನಿ (33) ಆತ್ಮಹತ್ಯೆ ಮಾಡಿಕೊಂಡ ಪತಿ.ಕಳೆದ 4 ವರ್ಷಗಳ ಹಿಂದೆ ಪೂಜಾ ಎಂಬುವ ವರನ್ನು ಸುನೀಲ್ ಮದುವೆ ಯಾಗಿದ್ದರು.
ಪತ್ನಿ ಎಲ್ಲರ ಬಳಿ ಪತಿಯನ್ನು ಅವಮಾನಿಸುತ್ತರಿದ್ದರು ಇದರಿಂದ ಜಗಳ ಕೂಡ ನಡೆದಿತ್ತು. ನಗರದಲ್ಲಿ ಕಂಪ್ಯೂಟರ್ ಶಾಪ್ ನಡೆಸುತ್ತಿದ್ದ ಸುನೀಲ್‌ವೈಯರ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೂ ಮುನ್ನ ಮೈ ವೈಫ್ ಈಸ್ ರಿಜನ್ ಫಾರ್ ಮೈ ಡೆತ್ ಅಂತ ಡೆತ್‌ನೋಟ್ ಬರೆದಿಟ್ಟಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಉದ್ಯಮಬಾಗ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.