ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಬಟಕುರ್ಕಿ ಗ್ರಾಮದ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯನ್ನು ಪದವಿಪೂರ್ವ ವಸತಿ ಕಾಲೇಜಾಗಿ ಉನ್ನತೀಕರಿಸಿ ಶಾಸಕರಾದ ಅಶೋಕ ಪಟ್ಟಣ ಅವರು ಉದ್ಘಾಟನೆ ನೆರವೇರಿಸಿದರು.
2017ರಲ್ಲಿ ಪ್ರಾರಂಭವಾದ ಈ ವಸತಿ ಶಾಲೆಯನ್ನು ಇದೀಗ ಮೇಲ್ದರ್ಜೆಗೆರಿಸಿ ವಿಜ್ಞಾನ ವಿಭಾಗದಲ್ಲಿ 80 ವಿದ್ಯಾರ್ಥಿಗಳಿಗೆ ವಸತಿ ಸಹಿತ ಅಧ್ಯಯನ ಅವಕಾಶ ಕಲ್ಪಿಸಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕೆಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಹನುಮಂತ ಲಕ್ಕನ್ನವರ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ, ಪ್ರಾಂಶುಪಾಲರು ಜಿ.ಎಚ್. ಮುದಕವಿ, ಬಸವನಗೌಡ ಪ್ಯಾಟಿಗೌಡ್ರ, ರಾಮಣ್ಣ ಬಿಡಕಿ, ಜಹೂರ ಹಾಜಿ, ಬೆನ್ನಪ್ಪ ತಿಮ್ಮಾಪೂರ ಸೇರಿದಂತೆ ವಸತಿ ಶಾಲಾ ಸಿಬ್ಬಂದಿಗಳು ಹಾಜರಿದ್ದರು.
ಉಪ ಪ್ರಾಂಶುಪಾಲ ಎಮ್.ಎಚ್. ಪೂಜೇರ ಸ್ವಾಗತಿಸಿದರು. ದೈಹಿಕ ಶಿಕ್ಷಕ ಆರ್.ಎಸ್. ಬಟಕುರ್ಕಿ ನಿರೂಪಣೆ ನಡೆಸಿದರು. ಎಚ್.ಎಸ್. ಗಂಟಿ ವಂದಿಸಿದರು.