ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ಹಠ ಹಿಡಿದ ಮಗನನ್ನು ತಂದೆ ಮತ್ತು ಹಿರಿಯ ಸಹೋದರ ಸೇರಿ ಹತ್ಯೆ ಮಾಡಿದ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕನಂದಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹತ್ಯೆಯಾದ ಯುವಕನ ಗುರುತು:
ಮೃತಪಟ್ಟ ವ್ಯಕ್ತಿಯನ್ನು ಮಂಜುನಾಥ ಉಳ್ಳಾಗಡ್ಡಿ (25) ಎಂದು ಗುರುತಿಸಲಾಗಿದೆ. ಈ ಕೃತ್ಯದಲ್ಲಿ ತಂದೆ ನಾಗಪ್ಪ ಉಳ್ಳೆಗಡ್ಡಿ (63) ಮತ್ತು ಸಹೋದರ ಗುರುಬಸಪ್ಪ ಉಳ್ಳೆಗಡ್ಡಿ (28) ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ವಿವರ:
ಮಂಜುನಾಥ ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ನಿರ್ಧರಿಸಿದ್ದ. ಪ್ರಾರಂಭದಲ್ಲಿ ಪೋಷಕರು ವಿರೋಧಿಸಿದ್ದರೂ, ನಂತರ ಮದುವೆಗೆ ಒಪ್ಪಿಕೊಂಡು ನಿಶ್ಚಿತಾರ್ಥ ಕೂಡಾ ಮುಗಿಸಿತ್ತು. ಆದರೆ, ಕುಡಿತದ ಚಟಕ್ಕೆ ಇಳಿದಿದ್ದ ಮಂಜುನಾಥ, ಮದುವೆಗೆ ಸಿದ್ಧತೆ ನಡೆಯುತ್ತಿದ್ದಾಗಲೂ ಮನೆಗೆ ಬಂದು ಪ್ರತಿನಿತ್ಯ ಗಲಾಟೆ ಮಾಡುತ್ತಿದ್ದ.
ನಿನ್ನೆ ಕೂಡಾ ಕುಡಿದು ಬಂದು ತಾಯಿಯೊಂದಿಗೆ ವಾಗ್ವಾದ ನಡೆಸಿದ್ದ. ಇದರಿಂದ ಸಿಟ್ಟಿಗೆದ್ದ ತಂದೆ ಹಾಗೂ ಸಹೋದರ ಸೇರಿ ಕಲ್ಲು, ಇಟ್ಟಿಗಳಿಂದ ಬರ್ಬರವಾಗಿ ತಲೆಗೆ ಹೊಡೆದು ಹತ್ಯೆ ಮಾಡಿದ್ದಾರೆ.
ಪೊಲೀಸರ ಕ್ರಮ:
ಈ ಪ್ರಕರಣವನ್ನು ಕಿತ್ತೂರು ಪೊಲೀಸ್ ಠಾಣೆ ಯಲ್ಲಿ ದಾಖಲಿಸಲಾಗಿದ್ದು, ಈಗಾಗಲೇ ತಂದೆ ಮತ್ತು ಸಹೋದರನನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಪಿ ಡಾ. ಭೀಮಾಶಂಕರ ಗುಳೇದ ತಿಳಿಸಿದ್ದಾರೆ.