ಬೆಳಗಾವಿ : ಜಯಾನಂದ ಮಾದರರ ರಾಗರಸಗೀತೆ ಕೃತಿ ಲೋಕಾರ್ಪಣೆ

Date:

Advertisements

ಬೆಳಗಾವಿ ನಗರದಲ್ಲಿ ಮಾನವ ಬಂಧುತ್ವ ವೇದಿಕೆ ಹಾಗೂ ಗೋಕಾವಿ ಗೆಳೆಯರ ಬಳಗ ಸಂಯುಕ್ತ ಆಶ್ರಯದಲ್ಲಿ ಜಯಾನಂದ ಮಾದರ ಅವರ ರಾಗರಸಗೀತೆ ಕೃತಿಯನ್ನು ಬಂಡಾಯ ಸಾಹಿತಿ ಯಲ್ಲಪ್ಪ ಹಿಮ್ಮಡಿ ಜನಾರ್ಪಣೆಗೊಳಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, “ಕಲೆಗಾಗಿ ಕಲೆ ಎನ್ನುವುದು ಅವಾಸ್ತವ. ಇಂದಿನ ಸಮಾಜದ ಸಂಕಟಗಳ ನಿವಾರಣೆಗೆ ಕಲೆ–ಸಾಹಿತ್ಯವನ್ನು ಸಾಧನವಾಗಿ ಬಳಸುವುದು ಅಗತ್ಯ. ವಿಚಾರ ಕ್ರಾಂತಿಯಾಗುವುದು ಕಲೆ–ಸಾಹಿತ್ಯದ ನಿಜವಾದ ಉದ್ದೇಶ. ಮಾನವೀಯತೆಯ ಉಳಿವಿಗಾಗಿ ಬರಹಗಾರರು ಮತ್ತು ಕಲಾವಿದರು ತಮ್ಮ ಸೃಜನಶೀಲತೆಯನ್ನು ಸಮಾಜಮುಖಿಯಾಗಿ ವ್ಯಕ್ತಪಡಿಸಬೇಕು” ಎಂದು ಅಭಿಪ್ರಾಯಪಟ್ಟರು.

ಹಿಂದೆ ಶೋಷಿತರು ಶೋಷಕರಿಗೆ – ನಾವೂ ಮನುಷ್ಯರಲ್ಲವೇ? ಎಂದು ಕೇಳುತ್ತಿದ್ದರು. ಆದರೆ ಇಂದು ಅಮಾಯಕರ ಮೇಲೆ ದೌರ್ಜನ್ಯ ಎಸಗುವ ಶೋಷಕರಿಗೆ – ನೀವೂ ನಮ್ಮಂತೆ ಮನುಷ್ಯರಲ್ಲವೇ? ಎಂದು ಪ್ರಶ್ನಿಸಬೇಕಾಗಿದೆ. ಅಲೆಮಾರಿಗಳಿಗೆ ಒಳ ಮೀಸಲಾತಿಯಲ್ಲಿ ಅನ್ಯಾಯ ಎಸಗಿದ ಸರ್ಕಾರದ ಕ್ರಮವನ್ನು ಖಂಡಿಸಿ ದೇವನೂರು ಮಹದೇವ, ಬರಗೂರು ರಾಮಚಂದ್ರಪ್ಪ, ಎಸ್.ಜಿ. ಸಿದ್ದರಾಮಯ್ಯ, ಸಿ.ಎಸ್. ದ್ವಾರಕನಾಥ್ ಮುಂತಾದ ಸಾಹಿತ್ಯಿಕರು ಧ್ವನಿ ಎತ್ತಿರುವುದು ಸಾಹಿತ್ಯ–ಕಲಾವಿದರು ಜನಪರರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ” ಎಂದರು.

Advertisements
1000494389

ರಂಗಕರ್ಮಿ ಶಿರೀಷ್ ಜೋಶಿ ಅವರು ಕೃತಿಯನ್ನು ಪರಿಚಯಿಸಿ, “ರಾಗರಸಗೀತೆ ಕೃತಿ ಸಂಗೀತ, ಸುಗಮ ಸಂಗೀತ, ಭಜನೆ ಹಾಗೂ ತತ್ವಪದ ಪರಂಪರೆಯ ತಾತ್ವಿಕ ಅಧ್ಯಯನದ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ವಿಶಿಷ್ಟ ಕೊಡುಗೆ” ಎಂದು ವಿಶ್ಲೇಷಿಸಿದರು.

ಅಧ್ಯಕ್ಷತೆ ವಹಿಸಿದ ರಂಗಚಿಂತಕ ರವಿ ಕೋಟಾರಗಸ್ತಿ, “ಸಾಹಿತ್ಯವು ನೊಂದ ಜನರ ಧ್ವನಿಯಾಗಿ ಬೆಳೆಯಬೇಕು. ಕಲಾವಿದರು ಸಮಾಜದ ಪ್ರತಿಬಿಂಬವಾಗಿ ನಿಲ್ಲಬೇಕು. ಜಯಾನಂದ ಮಾದರರ ಈ ಕೃತಿ ಸಂಗೀತ ಅಧ್ಯಯನ ಮಾತ್ರವಲ್ಲದೆ ಜನಪದ ಸಂಶೋಧನೆಗೂ ಮಾರ್ಗದರ್ಶಿಯಾಗಿದೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಆಕಾಶವಾಣಿಯ ಕಲಾವಿದ ಬಿ.ಸಿ. ದೇಗಾವಿಮಠ, ಡಾ. ಮಲ್ಲಿಕಾರ್ಜುನ್ ಮನ್ಸೂರ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸದಸ್ಯ ಯಾದವೇಂದ್ರ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಯಾಗಿ ಶ್ರೀಮತಿ ರಜನಿ ಜೀರಗ್ಯಾಳ ಮಾತನಾಡಿದರು.

ಅದೇ ಸಂದರ್ಭದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಸಿ.ವೈ. ಮೆಣಸಿನಕಾಯಿ, ಮಹದೇವಿ ಕಿತ್ತೂರ, ಈಶ್ವರಚಂದ್ರ ಬೆಟಗೇರಿ, ಮೀನಾಕ್ಷಿ ಸೂಡಿ, ಶ್ರೀಶೈಲ್ ಶಿರೂರ್, ವಿದ್ಯಾ ರೆಡ್ಡಿ, ಹೇಮಾ ಸೋನಳ್ಳಿ ಹಾಗೂ ಸುನಂದ ಹಾಲಬಾವಿ ಕವನ ವಾಚಿಸಿದರು.

ಈ ಸುದ್ದಿ ಓದಿದ್ದಿರಾ ? ಗ್ರಾಮೀಣ ಆರ್ಥಿಕತೆಯ ಶಕ್ತಿಯೇ ಕೃಷಿ ಕೂಲಿ ಕಾರ್ಮಿಕರು: ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಸರ್ಕಾರ ಸ್ಪಂದಿಸುವುದೇ?

ಬಂಡಾಯ ಸಂಘಟನೆಯ ಜಿಲ್ಲಾ ಸಂಚಾಲಕ ದೇಮಣ್ಣ ಸೊಗಲದ, ಕನ್ನಡ ಅಧ್ಯಾಪಕರ ಪರಿಷತ್ತಿನ ಕಾರ್ಯದರ್ಶಿ ಸುರೇಶ ಹನಗಂಡಿ, ಮಾನವ ಬಂಧುತ್ವ ವೇದಿಕೆಯ ಪ್ರಕಾಶ ಬೊಮ್ಮಣ್ಣವರ್, ಪವನ್ ಮುಂತಾದವರು ಭಾಗವಹಿಸಿದ್ದರು. ಕೃತಿಕಾರ ಜಯಾನಂದ ಮಾದರ್ ಪ್ರಸ್ತಾವಿಕ ಮಾತುಗಳಾಡಿದರು. ಅರುಣ್ ಸೌತಿಕಾಯಿ ಸ್ವಾಗತಿಸಿದರು, ಆನಂದ್ ಸೋರಗಾವಿ ವಂದಿಸಿದರು. ಕಲಾವಿದ ರಾಮಚಂದ್ರ ಕಾಕಡೆ ನಿರೂಪಿಸಿದರು.

ee dina logo with tagline copy
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ ನಗರದಲ್ಲಿ ನಾಳೆ ವಿದ್ಯುತ್ ವ್ಯತ್ಯಯ – ಆಗಸ್ಟ್ 24

ಬೆಳಗಾವಿ ನಗರದ ಹಲವು ಉಪಕೇಂದ್ರಗಳ ವ್ಯಾಪ್ತಿಯಲ್ಲಿ ಆಗಸ್ಟ್ 24, ಭಾನುವಾರ ಬೆಳಿಗ್ಗೆ...

ಬೆಳಗಾವಿ : ಡಿಸಿಸಿ ಬ್ಯಾಂಕ್ ಚುನಾವಣೆ ಲಕ್ಷ್ಮಣ ಸವದಿ ವಿರುದ್ಧ ಮಹೇಶ ಕುಮಠಳ್ಳಿ ಸ್ಪರ್ಧೆ

ಬೆಳಗಾವಿಯ ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ಅಥಣಿಯಿಂದ ಲಕ್ಷ್ಮಣ ಸವದಿ ವಿರುದ್ಧ ಮಾಜಿ...

ಬೆಳಗಾವಿ : ಗಾಂಜಾ ಮಾರಾಟ ಮಾಫಿಯಾ 9 ಮಂದಿ ಅರೆಸ್ಟ್ : ರೂ 30 ಲಕ್ಷ ಮೌಲ್ಯದ ಗಾಂಜಾ ವಶ

ಬೆಳಗಾವಿ ನಗರದಲ್ಲಿ ಗಾಂಜಾ ಮಾರಾಟ ಜಾಲ ಬಯಲಾಗಿದ್ದು, ಬೆಳಗಾವಿ ಪೊಲೀಸರು ದೊಡ್ಡ...

ಬೆಳಗಾವಿ : ಜಿಲ್ಲೆಯಲ್ಲಿ ಮೋಡ ಕವಿದ ಹವಾಮಾನ – ಅಲ್ಪ ಮಳೆಯ ಸಾಧ್ಯತೆ

ಬೆಳಗಾವಿ ಜಿಲ್ಲೆಯಲ್ಲಿ ತಾಪಮಾನ 20 ರಿಂದ 25 ಡಿಗ್ರಿ ಸೆಲ್ಸಿಯಸ್ ದಾಖಲಾಗುವ...

Download Eedina App Android / iOS

X