ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದಲ್ಲಿ ಸಾಲ ಬಾಧೆಯಿಂದ ಕಾರ್ಮಿಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಕಕ್ಕೇರಿ ಗ್ರಾಮದ ಜನತಾ ಕಾಲೊನಿಯ ಗೋವಿಂದ ಗಣಪತಿ ವಡ್ಡರ (34) ಅವರು ಫೈನಾನ್ಸ್ ಸಾಲಬಾಧೆಯಿಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಕೂಲಿ ಕಾರ್ಮಿಕರಾದ ಗೋವಿಂದ ಅವರು ಸೆಂಟ್ರಿಂಗ್ ಕೆಲಸದ ಸಾಮಗ್ರಿಗಳ ಖರೀದಿಗೆ ಫೈನಾನ್ಸ್‌ನಿಂದ ₹60 ಸಾವಿರ ಹಾಗೂ ಕುಟುಂಬದವರ ಹೆಸರಿನಲ್ಲಿ ಗ್ರಾಮಾಭಿವೃದ್ಧಿ ಸಂಘದಿಂದ ₹1 ಲಕ್ಷ ಸಾಲ ಪಡೆದಿದ್ದರು ಎಂದು ಮೂಲಗಳು ತಿಳಿಸಿವೆ.