ಬೆಳಗಾವಿ ನಗರದ ನೆಹರು ನಗರದ ಕನ್ನಡ ಭವನದಲ್ಲಿ ಬಿ.ಎಸ್.ಗವಿಮಠ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಭಾನುವಾರ ಹಮ್ಮಿಕೊಂಡಿದ್ದ ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಬೆಳಗಾವಿಯಲ್ಲಿ ಕನ್ನಡದ ಬೆಳವಣಿಗೆಗೆ ಅನೇಕ ಮಹನೀಯರು ದುಡಿದಿದ್ದಾರೆ. ಕನ್ನಡ ಕಟ್ಟುವ ಭಾಗವಾಗಿ ಇಲ್ಲಿ ನಿರಂತರವಾಗಿ ಕಾರ್ಯಕ್ರಮಗಳು ನಡೆಯಬೇಕು. ಆಗ ಮಾತೃಭಾಷೆ ಗಟ್ಟಿಯಾಗಿ ನೆಲೆಯೂರಲು ಸಾಧ್ಯ’ ಎಂದು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ ಸೋಮಶೇಖರ ಮಾತನಾಡಿದರು.
‘ಸಂಸ್ಕೃತಿ ಎಂಬುದು ನಮ್ಮನ್ನು ಪರಿಪೂರ್ಣತೆಯತ್ತ ಕೊಂಡೊಯ್ಯುವ ನೈತಿಕವಾದ ನಡಿಗೆ. ಸಂಸ್ಕೃತಿಯಿಂದ ನಮ್ಮಲ್ಲಿ ವಿವೇಕ, ವಿವೇಚನೆ, ಮಾನವೀಯತೆ ಮತ್ತು ಸಾಮರಸ್ಯದ ಮನೋಭಾವ ಬೆಳೆಯುತ್ತದೆ. ಗವಿಮಠ ಪ್ರತಿಷ್ಠಾನವು ಗಡಿ ನೆಲದಲ್ಲಿ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕೆಲಸದಲ್ಲಿ ತೊಡಗಿರುವುದು ಶ್ಲಾಘನೀಯ’ ಎಂದರು.
ಅವರಿಗೆ ‘ಸಾಹಿತ್ಯ ಸಿರಿ’ ರಂಗಭೂಮಿ ಕ್ಷೇತ್ರದಲ್ಲಿ ಗುರುತಿಸಿಕೊಂಡ ಸವದತ್ತಿಯ ಝಕೀರ್ ನದಾಫ್ ಅವರಿಗೆ ‘ರಂಗಚೇತನ’ ಹಾಗೂ ಹುನಗುಂದದಲ್ಲಿ ಪ್ರಾಧ್ಯಾಪಕರಾಗಿರುವ ಹುಕ್ಕೇರಿ ತಾಲ್ಲೂಕಿನ ಇಸ್ಲಾಂಪುರದ ಸಂತೋಷ ನಾಯಿಕ ಅವರಿಗೆ ‘ಕಾವ್ಯ ಸಿರಿ’ ಪ್ರಶಸ್ತಿ ನೀಡಲಾಯಿತು
‘