ಲಾಡ್ಜ್‌ನಲ್ಲಿ ರೂಮ್ ಕೊಡಲು ನಿರಾಕರಿಸಿದ್ದಕ್ಕೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದಾರೆ. ಕಲ್ಲು ತೂರಿ ಬೈಕ್ ಹಾಗೂ ಕಾರಿನ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ.
ಕೈಯಲ್ಲಿ ಲಾಂಗ್, ಮಚ್ಚು ಹಿಡಿದು ವಾಹನಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಚಿಕ್ಕೋಡಿ ಪಟ್ಟಣದ ಬೃಂದಾವನ ಲಾಡ್ಜ್ ಮುಂದೆ ಪಾರ್ಕ್ ಮಾಡಲಾಗಿದ್ದ ಕಾರ್ ಹಾಗೂ 5 ಕ್ಕೂ ಹೆಚ್ಚು ಬೈಕ್ ಮೇಲೆ ಕಲ್ಲು ತೂರಾಟ ನಡೆಸಿದ್ದು ಕಿಡಿಗೇಡಿಗಳ ಅಟ್ಟಹಾಸಕ್ಕೆ ಬೈಕ್ ಹಾಗೂ ಕಾರ್ ನುಜ್ಜ ಗುಜ್ಜಾಗಿವೆ.
ಚಿಕ್ಕೋಡಿಯ ಬೃಂದಾವನ ಲಾಡ್ಜ್‌ನಲ್ಲಿ ಮೂವರು ಯುವಕರು ರೂಮ್ ಕೇಳಲು ಬಂದಿದ್ದರು. ಪಾನಮತ್ತರಾಗಿದ್ದ ಹಿನ್ನೆಲೆ ರೂಮ್ ನೀಡಲು ಲಾಡ್ಜ್ ಮಾಲೀಕ ನಿರಾಕರಿಸಿದ್ದ. ಇದೇ ಸಿಟ್ಟಿನಲ್ಲಿ ಒಂದು ಗಂಟೆ ಬಳಿಕ ಬಂದು ಲಾಡ್ಜ್ ಮೇಲೆ ಹಾಗೂ ಅಲ್ಲೆ ಪಕ್ಕದಲ್ಲಿ ಇದ್ದ ಕಾರ್ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಅಲ್ಲಿಂದ ಓತಾರಿ ಗಲ್ಲಿ ಹೊಸಪೇಟ್ ಗಲ್ಲಿಯಲ್ಲಿನ ಬೈಕ್‌ಗಳ ಮೇಲೆ ಕಲ್ಲು ತೂರಿ ಬೈಕ್‌ಗಳನ್ನ ಕಿಡಿಗೇಡಿಗಳು ಜಖಂ ಮಾಡಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಾರಾಷ್ಟ್ರದ ಇಚಲಕರಂಜಿ ಮೂಲದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.