ಬೆಳಗಾವಿ ಜಿಲ್ಲೆ ಸವದತ್ತಿ ಪಟ್ಟಣದ ಕೋಟೆ ಆವರಣದಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ಸಂಯುಕ್ತ ಆಶ್ರಯದಲ್ಲಿ ನಡೆದ 28ನೇ ಪರಸಗಡ ನಾಟಕೋತ್ಸವ-2025 ನಿಮಿತ್ಯ ಸವದತ್ತಿಯ ತಾಲೂಕಿನ ಸ್ವಾತಂತ್ರ್ಯ ಹೋರಾಟಗಾರರ ಕುರಿತಾದ ನೆಲ ಮುಗಿಳು ನಾಟಕ ಪ್ರದರ್ಶನ ಮಾಡಿದರು
ಪರಸಗಡ ನಾಟಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಬಸವರಾಜ ಕಾರದಗಿಯವರು ಮಾತನಾಡಿ ಈ ಭಾಗದಲ್ಲಿ ರಂಗ ಚಟುವಟಿಕೆಗಳಿಗೆ ಸರಿಯಾದ ಸಂಪನ್ಮೂಲಗಳು ಇಲ್ಲದಾಗಿದ್ದು, ಕಲಾವಿದರಿಗೆ ಅವಶ್ಯವಾಗಿರುವ ರಂಗ ಮಂದಿರದ ಜತೆಗೆ ಮೂಲ ಸೌಕರ್ಯ ಕಲ್ಪಿಸಲು ಸರಕಾರ ಆಸಕ್ತಿ ತೋರಬೇಕು'”, ಎಂದರು.
ಡಾ. ಎ.ಸಿ. ಕಬ್ಬಿಣ ಹಾಗೂ ಯ.ರು. ಪಾಟೀಲ, ಮಾತನಾಡಿ ‘ರಂಗ ಆರಾಧನಾ ಸಂಘಟನೆಯ ಕಲಾವಿದರು ಪ್ರತಿ ವರ್ಷ ರಂಗ ಚಟುವಟಿಕೆಗಳ ಮುಖಾಂತರ ಜನರನ್ನು ರಂಜಿಸುತ್ತಾ ಬಂದಿದ್ದು, ಅವರ ಕಾರ್ಯವು ಎಲ್ಲರಲ್ಲಿ ರಂಗಭೂಮಿ ಅಭಿರುಚಿಯನ್ನು ಹೆಚ್ಚಿಸುತ್ತಿದೆ”, ಎಂದು ಹೇಳಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಸಂಘಟನೆಗೆ ಸಹಕಾರ ನೀಡುತ್ತ ಬಂದಿದ್ದ ಬೆಟಸೂರಮಠದ ಲಿಂ. ವೇದಮೂರ್ತಿ ಅಜ್ಜಯ್ಯಸ್ವಾಮೀಜಿ, ಸಾವಿತ್ರಿ ಗದಗಯ್ಯ ಪುರಾಣಿಕಮಠ, ಜಯಂತಿ ವಸಂತಪ್ರಸಾದ ರೇವಡಿ,ಚಿನ್ಮಯ್ಯ ಬಸಯ್ಯ ಹಿರೇಮಠ,ಶಾಂತಪ್ಪ ಸಂಪಗಾಂವಿ, ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ಧೇಶಕ ಕೆ.ಎಚ್.ಚೆನ್ನೂರ, ಜಿ.ಎಂ ಪುರಾಣಿಕಮಠ,ಬಿ.ಎಸ್.ಹಿರೇಮಠ,ಈರಣ್ಣ ಸಂಪಗಾಂವಿ,ಸುಮತಿ ರೇವಡಿ,ಝಾಕೀರ ನಧಾಪ ಇತರರು ಉಪಸ್ಥಿತರಿದ್ದರು.