ರಾಜ್ಯ ಸರ್ಕಾರದ ಮೇಲೆಯು ಬಿಜೆಪಿ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಕಿಡಿಕಾರಿದ್ದಾರೆ. ಕಾಂಗ್ರೆಸ್ ಶಾಸಕರಾದ ಬಿ.ಆರ್. ಪಾಟೀಲ ಅವರು ಭ್ರಷ್ಟಾಚಾರ ಕುರಿತು ನೀಡಿರುವ ಹೇಳಿಕೆಯನ್ನು ಸತ್ಯವೆಂದು ಬೆಂಬಲಿಸಿದ ಅವರು, “ಸರ್ಕಾರದಲ್ಲಿ ಯಾವುದೇ ಇಲಾಖೆ ಶುದ್ಧವಿಲ್ಲ, ಎಲ್ಲೆಡೆ ಲಂಚದ ತಂತ್ರವಿದೆ” ಯಾವುದೇ ಸರ್ಕಾರಿ ಕೆಲಸಕ್ಕೂ ಲಂಚವಿಲ್ಲದೆ ನಡೆಯುತ್ತಿಲ್ಲ. ಎಂದು ಸಿಟಿ ರವಿ ಬೆಳಗಾವಿ ನಗರದಲ್ಲಿ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ. ರವಿ, “ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ‘ಗ್ಯಾರಂಟಿ’ಗಳನ್ನು ನೀಡಿದರು. ಆದರೆ ಅದರ್ಥ, ಅವರು ಭ್ರಷ್ಟಾಚಾರಕ್ಕೆ ಪರವಾನಗಿ ಪಡೆದಿದ್ದಾರೆ ಎಂಬಂತಾಗಿದೆ. ಯಾವುದೇ ಸರ್ಕಾರಿ ಕೆಲಸಕ್ಕೂ ಲಂಚವಿಲ್ಲದೆ ನಡೆಯುತ್ತಿಲ್ಲ. ಸಚಿವರು, ಶಾಸಕರು ಮತ್ತು ಅಧಿಕಾರಿಗಳಿಗೂ ನಿಗದಿತ ಲಂಚದ ಮೊತ್ತವಿದೆ. ಹಾಗಾದರೆ ಲಂಚದ ‘ರೇಟ್‌ಕಾರ್ಡ್’ ಕಚೇರಿಗಳಲ್ಲೇ ಹಾಕಿಬಿಡಿ” ಎಂದು ವ್ಯಂಗ್ಯವಾಡಿದರು.
“ಲಂಚ ಕೊಡಲೇಬೇಕೆಂದು ಮನಸ್ಸು ಮಾಡುತ್ತಿರುವ ಸ್ಥಿತಿಗೆ ಜನರು ತಲುಪಿದ್ದಾರೆ” ಎಂದು ಟೀಕಿಸಿದ ಅವರು,
“ಲಂಚ ಕೊಟ್ಟವರಿಗಷ್ಟೇ ಮನೆ ಕೊಡಲಾಗುತ್ತಿದೆ ಎಂಬುದು ಪಾಪದ ಕೃತ್ಯವಾಗಿದೆ. ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ನಾವು ಈ ಬಗ್ಗೆ ಸದನದಲ್ಲಿ ಹಲವು ಬಾರಿ ಎತ್ತಿಹಿಡಿದಿದ್ದೇವೆ. ಈಗ ಖುದ್ದು ಕಾಂಗ್ರೆಸ್‌ನ ಶಾಸಕ ರಾಜು ಕಾಗೆಯೇ ಈ ಸತ್ಯವನ್ನು ಒಪ್ಪಿಕೊಂಡಿದ್ದಾರೆ. ಅವರ ಮಾತಿನಲ್ಲಿ ಹೊಸದೇನೂ ಇಲ್ಲ, ಅದು ಸತ್ಯದ ಪ್ರತಿಬಿಂಬ ಮಾತ್ರ” ಎಂದು ಹೇಳಿದರು.