ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಓಬಳಾಪೂರ ಗ್ರಾಮದ ಶ್ರೀ ಡಿ.ಜಿ. ಪಾಟೀಲ ಸರ್ಕಾರಿ ಪ್ರೌಢ ಶಾಲೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಸಾಧಿಸಿ ಗಮನ ಸೆಳೆದಿದೆ.
ಈ ವರ್ಷ ಪರೀಕ್ಷೆಗೆ ಹಾಜರಾದ ಒಟ್ಟು 51 ವಿದ್ಯಾರ್ಥಿಗಳಲ್ಲಿ 51 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಅಶ್ವಿನಿ ಹ. ಮಾದರ 602 ಅಂಕಗಳೊಂದಿಗೆ (96.32%) ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾಳೆ.

ಅಕ್ಷತಾ ಲ. ಹಂಸನೂರ 591 ಅಂಕಗಳೊಂದಿಗೆ (94.56%) ದ್ವಿತೀಯ ಸ್ಥಾನ

ಚಿತ್ರಾ ಹ. ಹಾಲಿಗೇರಿ 590 ಅಂಕಗಳೊಂದಿಗೆ (94.40%) ತೃತೀಯ ಸ್ಥಾನ ಪಡೆದಿದ್ದಾರೆ.
ವಿಷಯವಾರು ಸಾಧನೆಗಳಲ್ಲೂ ವಿದ್ಯಾರ್ಥಿಗಳು ಮೆರೆದಿದ್ದಾರೆ. ಕನ್ನಡದಲ್ಲಿ ಅಶ್ವಿನಿ ಮಾದರ, ಚಿತ್ರಾ ಹಾಲಿಗೇರಿ, ಸುಕನ್ಯಾ ಅರಸಿನಗೋಡಿ ಮತ್ತು ಕಾವೇರಿ ಕರಡಿಗುಡ್ಡ 125ಕ್ಕೆ 125 ಅಂಕಗಳನ್ನು ಗಳಿಸಿದ್ದಾರೆ. ಹಿಂದಿ ವಿಷಯದಲ್ಲಿ ಚೈತ್ರಾ ಹಾಲಿಗೇರಿ ಹಾಗೂ ಕಾವೇರಿ ಕರಡಿಗುಡ್ಡ 100ಕ್ಕೆ 100 ಅಂಕ ಪಡೆದಿದ್ದಾರೆ. ಸಮಾಜ ವಿಜ್ಞಾನದಲ್ಲಿ ಅಶ್ವಿನಿ ಮಾದರ ಶತಕ ಸಾಧಿಸಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಿಕ್ಷಕ ವೃಂದದ ಪರಿಶ್ರಮ ಕಾರಣವಾಗಿದ್ದು, ವಿದ್ಯಾರ್ಥಿಗಳ ಯಶಸ್ಸಿಗೆ ಎಲ್ಲರಿಂದ ಅಭಿನಂದನೆಗಳು ವ್ಯಕ್ತವಾಗಿವೆ. ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ಗ್ರಾಮದ ಹಿರಿಯರು ಹಾಗೂ ಸಾಮಾಜಿಕ ಹೋರಾಟಗಾರರಾದ ಶ್ರೀನಿವಾಸಗೌಡ ಪಾಟೀಲ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದ್ದಾರೆ.




