ನ್ಯೂಸ್ ಲಾಂಡ್ರಿಯ ಮಹಿಳಾ ಉದ್ಯೋಗಿಗಳ ಬಗ್ಗೆ ಲೈಂಗಿಕ ನಿಂದನೆಯ ಹೇಳಿಕೆಗಳನ್ನು ಪೋಸ್ಟ್ ಮಾಡಿದ ಬಲಪಂಥೀಯ ಲೇಖಕ ಅಭಿಜಿತ್ ಅಯ್ಯರ್ ಮಿತ್ರ ವಿರುದ್ಧ ಎಫ್‌ಐಆರ್ ದಾಖಲಿಸಲು ದೆಹಲಿ ನ್ಯಾಯಾಲಯವು ಬುಧವಾರ ಆದೇಶಿಸಿದೆ.
ಅಭಿಜಿತ್ ಅಯ್ಯರ್ ಮಿತ್ರ ಅವರ ಎಕ್ಸ್ ಪೋಸ್ಟ್‌ಗಳು ಪ್ರಾಥಮಿಕವಾಗಿ ಲೈಂಗಿಕ ನಿಂದನೆ ಮತ್ತು ಮಹಿಳೆಯರ ಘನತೆಗೆ ಚ್ಯುತಿ ತರುವ ಉದ್ದೇಶ ಹೊಂದಿವೆ ಎಂದು ದೆಹಲಿಯ ಸಾಕೇತ್ ನ್ಯಾಯಾಲಯದ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಭಾನು ಪ್ರತಾಪ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನು ಓದಿದ್ದೀರಾ? ‘ನ್ಯೂಸ್‌ಲಾಂಡ್ರಿ’ ಪತ್ರಕರ್ತೆಯರ ವಿರುದ್ಧ ಮಾನಹಾನಿ: ಅಭಿಜಿತ್ ಅಯ್ಯರ್‌ಗೆ ಸಮನ್ಸ್ ನೀಡಿದ ದೆಹಲಿ ಹೈಕೋರ್ಟ್
ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 75(3) (ಲೈಂಗಿಕ ಕಿರುಕುಳ) ಮತ್ತು ಸೆಕ್ಷನ್ 79 (ಮಹಿಳೆಯ ಘನತೆಗೆ ಅವಮಾನ) ಅಡಿಯಲ್ಲಿ ಪ್ರಕರಣ ದಾಖಲಿಸಲು ನ್ಯಾಯಾಲಯ ಸೂಚಿಸಿದೆ. ಆರೋಪಿತರು ಬಳಸಿದ ಸಾಮಾಜಿಕ ಮಾಧ್ಯಮ ಖಾತೆಯನ್ನು ಪರಿಶೀಲಿಸಲು ಮತ್ತು ಅವರು ಬಳಸಿದ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಳ್ಳಲು ಪೊಲೀಸರಿಗೆ ಕೋರ್ಟ್ ನಿರ್ದೇಶಿಸಿದೆ.
ಆರೋಪಿ ಅಭಿಜಿತ್ ಪತ್ರಕರ್ತೆಯರನ್ನು ವೇಶ್ಯೆಯರು ಎಂದು, ನ್ಯೂಸ್‌ಲ್ಯಾಂಡ್ರಿಯನ್ನು ವೇಶ್ಯಾಗೃಹವೆಂದೂ ಹೇಳಿ ಟ್ವೀಟ್ ಮಾಡಿದ್ದು ಇದರ ವಿರುದ್ಧ ನ್ಯೂಸ್‌ಲ್ಯಾಂಡ್ರಿಯ ಪತ್ರಕರ್ತೆಯರು ಮೊಕದ್ದಮೆ ದಾಖಲಿಸಿದ್ದಾರೆ. ಆರೋಪಿ ಅಭಿಜಿತ್ ಲಿಖಿತವಾಗಿ ಕ್ಷಮೆಯಾಚಿಸಬೇಕು. 2 ಕೋಟಿ ರೂ. ಪರಿಹಾರ ಕೊಡಿಸಬೇಕೆಂದು ಮೊಕದ್ದಮೆಯಲ್ಲಿ ದೆಹಲಿ ಹೈಕೋರ್ಟ್ ಅನ್ನು ಮನವಿ ಮಾಡಿದ್ದಾರೆ. ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ದೆಹಲಿ ಹೈಕೋರ್ಟ್ ಈಗಾಗಲೇ ಟ್ವೀಟ್ ಅಳಿಸಿಹಾಕುವಂತೆ ಅಭಿಜಿತ್‌ಗೆ ತಾಕೀತು ಮಾಡಿದೆ.





