ಅಹಮದಾಬಾದ್ನಲ್ಲಿ ನಡೆದ ವಿಮಾನ ಅಪಘಾತದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಡಿಜಿಸಿಎ ನಿರ್ದೇಶನದಂತೆ ಬೆಳಗಾವಿ ಜಿಲ್ಲೆಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಗುರುವಾರ ವಿಮಾನ ಅಪಘಾತದ ಅಣಕು ಅಭ್ಯಾಸ (Mock Drill) ನೆರವೇರಿಸಲಾಯಿತು.
ವಿಮಾನ ನಿಲ್ದಾಣ ಭದ್ರತಾ ವ್ಯವಸ್ಥೆಗಳ ಸನ್ನದ್ಧತೆ ಹಾಗೂ ತುರ್ತು ಪರಿಸ್ಥಿತಿಗಳಿಗೆ ಸಕಾಲಿಕ ಪ್ರತಿಕ್ರಿಯೆ ನೀಡುವ ನಿಟ್ಟಿನಲ್ಲಿ ಈ ಅಭ್ಯಾಸ ಕೈಗೊಳ್ಳಲಾಯಿತು. ವಿಮಾನ ನಿಲ್ದಾಣ ಪ್ರಾಧಿಕಾರ, ಪೊಲೀಸ್ ಇಲಾಖೆ, ವೈದ್ಯಕೀಯ ಸೇವೆಗಳು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿ ಹಲವು ಇಲಾಖೆಗಳ ಅಧಿಕಾರಿಗಳು ಈ ಅಭ್ಯಾಸದಲ್ಲಿ ಪಾಲ್ಗೊಂಡರು.
ಈ ಸುದ್ದಿ ಓದಿದ್ದಿರಾ ? ಬೆಳಗಾವಿ | ಸವದತ್ತಿ ಯಲ್ಲಮ್ಮನ ಗುಡ್ಡ ದೇವಸ್ಥಾನ ಹುಂಡಿಯಲ್ಲಿ ₹1.4 ಕೋಟಿ ಕಾಣಿಕೆ ಸಂಗ್ರಹ
ಅಪಘಾತದ ಸಂದರ್ಭದಲ್ಲಿ ಜನರನ್ನು ರಕ್ಷಿಸುವ, ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ನೀಡುವ, ಅಗ್ನಿ ನಂದಿಸುವ ಮತ್ತು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ತುರ್ತು ಕ್ರಮ ಕೈಗೊಳ್ಳುವ ಕಾರ್ಯಾಚರಣೆಗಳನ್ನು ಪರಿಣಾಮಕಾರಿಯಾಗಿ ನಡೆಸಲಾಯಿತು. ಎಲ್ಲ ಯಂತ್ರಾಂಗಗಳ ಕಾರ್ಯಪದ್ಧತಿ, ಸಂವಹನ ವ್ಯವಸ್ಥೆ, ಸಿಬ್ಬಂದಿಗಳ ತುರ್ತು ಕಾರ್ಯಪಟುತೆಯನ್ನು ಪರಿಶೀಲಿಸಲಾಯಿತು.