ಬೆಳಗಾವಿ ಜಿಲ್ಲೆಯ ರಾಮದುರ್ಗ ಪುರಸಭೆಯ 2025-26ನೇ ಸಾಲಿನ ₹33.81 ಕೋಟಿ ಆಯವ್ಯಯ ಬಜೆಟ್ ನ್ನು ಅಂಗೀಕರಿಸಲಾಯಿತು. ಪುರಸಭೆ ಸದಸ್ಯರು ₹4.98 ಲಕ್ಷ ಉಳಿತಾಯ ಬಜೆಟ್‌ಗೆ ಒಪ್ಪಿಗೆ ನೀಡಿದರು.
ಪುರಸಭೆಯ ಸ್ಥಳೀಯ ಅಭಿವೃದ್ಧಿ ಕಾಮಗಾರಿ, ಸಿಬ್ಬಂದಿ ವೇತನ, ಕುಡಿಯುವ ನೀರು, ಬೀದಿ ದೀಪಗಳು ಸೇರಿದಂತೆ ರಾಜಸ್ವ ಖಾತೆಗೆ ₹1,22,97,700, ಬಂಡವಾಳ ಖಾತೆಗೆ ₹5,57,80,000, ಮತ್ತು ಅಸಾಧಾರಣ ಖಾತೆಗೆ ₹15,88,76,009 ವೆಚ್ಚ ಮಾಡಲಾಗುವುದು.
ರಾಜ್ಯ ಮತ್ತು ಕೇಂದ್ರ ಅನುದಾನ:
ರಾಜ್ಯ ಹಣಕಾಸು ಆಯೋಗದಿಂದ ₹9 ಲಕ್ಷ ಅನುದಾನ
ಕೇಂದ್ರ ಹಣಕಾಸು ಆಯೋಗದಿಂದ ₹185 ಲಕ್ಷ ಅನುದಾನ
ಈ ಅನುದಾನಗಳ ಕ್ರಿಯಾಯೋಜನೆ ಸಿದ್ಧಪಡಿಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ಮಹತ್ವದ ನಿರ್ಧಾರಗಳು:
✔ ಆಸ್ತಿ ತೆರಿಗೆ ಶೇ.3% ಹೆಚ್ಚಳ – ಸಭೆಯಲ್ಲಿ ಚರ್ಚಿಸಿ ಅನುಮೋದನೆ.
✔ ಕುಡಿಯುವ ನೀರಿನ ಬಿಲ್ ₹80ರಿಂದ ₹70ಕ್ಕೆ ಇಳಿಸುವ ಒತ್ತಾಯ – ಜನರ ಸಹಲಾಭಕ್ಕಾಗಿ.
✔ ಒಟ್ಟು ₹33.81 ಕೋಟಿ ವೆಚ್ಚ ನಿರ್ಧಾರ – ವಿವಿಧ ಅಭಿವೃದ್ಧಿ ಕಾಮಗಾರಿಗಳ ಅನುದಾನ ವಿಂಗಡಣೆ.
✔ ರಾಜ್ಯ, ಕೇಂದ್ರ ಸರ್ಕಾರ ಹಾಗೂ ಸ್ಥಳೀಯ ತೆರಿಗೆ ಸೇರಿ ಪುರಸಭೆಗೆ ₹12.54 ಕೋಟಿ ಆದಾಯ ನಿರೀಕ್ಷೆ.
ಪುರಸಭೆ ಅಧ್ಯಕ್ಷೆ ಲಕ್ಷ್ಮಿ ಕಡಕೋಳ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಪುರಸಭೆ ಉಪಾಧ್ಯಕ್ಷೆ ಸರಿತಾ ಧೂತ, ಮುಖ್ಯಾಧಿಕಾರಿ ಈರಣ್ಣ ಗುಡದಾರಿ ಸೇರಿದಂತೆ ಎಲ್ಲಾ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ರಾಮಪ್ಪ ಬೆಂಬಳಗಿ ಬಜೆಟ್ ಮಂಡನೆ ಮಂಡಿಸಿ, ಸಭೆಯ ಅನುಮೋದನೆ ಪಡೆಯಲಾಯಿತು.