ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಬೆಳಗಾವಿ ಹೊರ ವಲಯದ ಕಾಕತಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವರ್ಷದ ಅಪ್ರಾಪ್ತ ಮೇಲೆ 6 ಮಂದಿ ದುರುಳರು 2 ಬಾರಿ ಗ್ಯಾಂಗ್ ರೇಪ್ ಮಾಡಿದ್ದಾರೆ. ಕಳೆದ 6 ತಿಂಗಳ ಹಿಂದೆ ಬಾಲಕಿಯನ್ನ ಸ್ನೇಹಿತನೊಬ್ಬ ಪುಸಲಾಯಿಸಿ ಗುಡ್ಡಕ್ಕೆ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿ, ಅದನ್ನು ವೀಡಿಯೊ ಮಾಡಿದ್ದ.
ಬಳಿಕ ಅದೇ ವೀಡಿಯೊ ಇಟ್ಟುಕೊಂಡು ಬ್ಯಾಕ್‌ಮೇಲ್ ಮಾಡಿ ಅಪ್ರಾಪ್ತಯ ಮೇಲೆ ಮತ್ತೊಮ್ಮೆ ರೇಪ್ ಮಾಡಿದ್ದರು. ಈ ಸಂದರ್ಭದಲ್ಲೂ ಆತನ ಸ್ನೇಹಿತರು ವೀಡಿಯೊ ಮಾಡಿಕೊಂಡಿದ್ದರು. ಈ ವೀಡಿಯೊ ಇಟ್ಟುಕೊಂಡು ಮತ್ತೆ ಮತ್ತೆ ಅಪ್ರಾಪ್ತ ಬಾಲಕಿಯನ್ನು ಬೆದರಿಸಿ ಅತ್ಯಾಚಾರ ನಡೆಸಲಾಗಿದೆ ಎಂದು ದೂರಲಾಗಿದ್ದು 6 ಮಂದಿ ವಿರುದ್ಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಫೋಕ್ಲೋಕಾಯ್ದೆಯಡಿ ಪ್ರಕರಣ ದಾಖಲಾಗಿದೆ.