ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಚನ್ನಮ್ಮ ವೃತ್ತದಲ್ಲಿರುವ ನವನಾಥ ಜ್ಯುವೆಲ್ಲರ್ಸ್ ನ ಶಟರ್ ಮುರಿದು ಕಳ್ಳರು ಚಿನ್ನ, ಬೆಳ್ಳಿ ಆಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ.
ಜ್ಯುವೆಲ್ಲರ್ಸ್ ಮಾಲೀಕ ವಿನಾಯಕ ವಿಜಯಕುಮಾರ ಮಾಳಿ ಸದಲಗಾ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ಡಿವೈಎಸ್ಪಿ ಗೋಪಾಲಕೃಷ್ಣ ಗೌಡರ, ಸಿಪಿಐ ವಿಶ್ವನಾಥ್ ಚೌಗಲಾ, ಸದಲಗಾ ಪಿಎಸ್‌ಐ ಶಿವಕುಮಾರ್ ಬಿರಾದಾರ ಮಾರ್ಗದರ್ಶನದಲ್ಲಿ
ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಸ್ಥಳಕ್ಕೆ ಕರೆಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಕಳ್ಳರು 8 ಲಕ್ಷ ರೂಪಾಯಿ ಮೌಲ್ಯದ 9 ಕೆಜಿ ಬೆಳ್ಳಿ ಆಭರಣ ಮತ್ತು 16,000 ಹಣ ಕದ್ದಿದ್ದಾರೆ. ಅದಲ್ಲದೇ ಬುದ್ಧ ವಿಹಾರ ಮುಂಭಾಗದಲ್ಲಿದ್ದ 2 ದ್ವಿಚಕ್ರ ಬೈಕಗಳನ್ನೂ ಕದ್ದಿದ್ದಾರೆ ಎಂದು ತಿಳಿದು ಬಂದಿದೆ.
ಈ ಸುದ್ದಿ ಓದಿದ್ದಿರಾ ? ಬೆಳಗಾವಿ : ಬೆಳಗಾವಿಯಲ್ಲಿ ವಿಮಾನ ಅಪಘಾತ ಅಣಕು ಪ್ರದರ್ಶನ
ಚನ್ನಮ್ಮ ವೃತ್ತದಲ್ಲಿರುವ ಹೈಮಾಸ್ಟ್ ದೀಪ ಕಳೆದ ಎರಡು-ಮೂರು ದಿನಗಳಿಂದ ಆಫ್ ಆಗಿರುವುದರಿಂದ ಕಳ್ಳರು ಕತ್ತಲೆಯ ಲಾಭವನ್ನು ಪಡೆದುಕೊಂಡಿದ್ದಾರೆ. ಖಾಸಗಿ ಸಿಸಿ ಟಿವಿಯಲ್ಲಿ ಕಳ್ಳರ ಓಡಾಟದ ದೃಶ್ಯ ಸೆರೆಯಾಗಿದೆ. ಈ ದೃಶ್ಯಗಳನ್ನು ಆಧರಿಸಿ ಕಳ್ಳರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.