ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಖಾನಪೇಟೆಯ ಶ್ರೀ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕರ ಚುನಾವಣೆಯ ವೇಳಾಪಟ್ಟಿ ಪ್ರಕಟಗೊಂಡಿದೆ. ಮಾನ್ಯ ಸಹಕಾರ ಚುನಾವಣಾ ಪ್ರಾಧಿಕಾರದ ಆದೇಶದಂತೆ ಬೈಲಹೊಂಗಲ ಉಪವಿಭಾಗಾಧಿಕಾರಿಯನ್ನು ರಿಟರ್ನಿಂಗ್ ಅಧಿಕಾರಿಯಾಗಿ ನೇಮಿಸಲಾಗಿದೆ.
ಚುನಾವಣೆ ಸೆಪ್ಟೆಂಬರ್ 14, 2025 ರಂದು ಜರುಗಲಿದ್ದು, ಇದೇ ದಿನ ಮತ ಎಣಿಕೆ ಪ್ರಕ್ರಿಯೆಯೂ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಒಟ್ಟು 18 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ
ಪರಿಶಿಷ್ಟ ಜಾತಿ – 1 ಸ್ಥಾನ
ಪರಿಶಿಷ್ಟ ಪಂಗಡ – 1 ಸ್ಥಾನ
ಹಿಂದುಳಿದ ಅ ವರ್ಗ – 1 ಸ್ಥಾನ
ಹಿಂದುಳಿದ ಬ ವರ್ಗ – 1 ಸ್ಥಾನ
ಮಹಿಳಾ ಮೀಸಲು – 1 ಸ್ಥಾನ
ಬ ವರ್ಗ ಸಹಕಾರಿ ಸಂಘ ಕ್ಷೇತ್ರ – 1 ಸ್ಥಾನ
ಡ ವರ್ಗ (ಕಬ್ಬು ಬೆಳೆಗಾರರಲ್ಲದವರು) – 1 ಸ್ಥಾನ
ಮುಖ್ಯ ದಿನಾಂಕಗಳು :
ಆಗಸ್ಟ್ 29 – ಮತದಾರರ ಪಟ್ಟಿಯ ಪ್ರಕಟಣೆ
ಆಗಸ್ಟ್ 30 – ನಾಮಪತ್ರ ಸಲ್ಲಿಕೆ
ಸೆಪ್ಟೆಂಬರ್ 8 – ನಾಮಪತ್ರ ಹಿಂಪಡೆಯುವ ಕೊನೆಯ ದಿನ
ಸೆಪ್ಟೆಂಬರ್ 14 – ಚುನಾವಣೆ ಮತ್ತು ಮತ ಎಣಿಕೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.