ಮಾನವೀಯತೆ, ಕರುಣೆ ಎನ್ನುವುದು ಆಸ್ಪತ್ರೆಯ ಆವರಣದಲ್ಲಿ ಮರೆತುಹೋದಂತಾಗಿದೆ. ಬೆಳಗಾವಿ ಬಿಮ್ಸ್ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಬಂದಿದ್ದ ಮಹಿಳಾ ರೋಗಿಯನ್ನು ಸಿಬ್ಬಂದಿ ಚಳಿಯಲ್ಲಿ, ಬಿಟ್ಟುಹೋದ ಹೃದಯವಿದ್ರಾವಕ ಘಟನೆ ನಡೆದಿದೆ.
15 ದಿನಗಳ ಹಿಂದೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಆ ಮಹಿಳೆ ಮತ್ತೆ ಶಸ್ತ್ರಚಿಕಿತ್ಸೆಗೆ ಬಂದಿದ್ದರು. ವಾರ್ಡ್‌ನಿಂದ ಹಳೆಯ ಕಟ್ಟಡದಲ್ಲಿರುವ ಕಾಲು ಮುರಿತ ಶಸ್ತ್ರಚಿಕಿತ್ಸಾ ವಿಭಾಗಕ್ಕೆ ಕರೆದೊಯ್ಯುವ ವೇಳೆ ಆಂಬ್ಯುಲೆನ್ಸ್ ಸಿದ್ಧಪಡಿಸದೆ ಸಿಬ್ಬಂದಿ ಮಹಿಳಾ ರೋಗಿಯನ್ನು ಹೊರಗೆ ಬಿಟ್ಟು ಹೋಗಿದ್ದಾರೆ.
ಅರ್ಧ ಗಂಟೆಗೂ ಹೆಚ್ಚು ಕಾಲ ತೊಂದರೆ ಅನುಭವಿಸಿ, ಚಳಿಯಲ್ಲಿ ಪರದಾಡುತ್ತಿದ್ದ ಆ ರೋಗಿಯನ್ನು ನಂತರದಲ್ಲಿ ಮಳೆಯಲ್ಲಿಯೇ ಆಂಬ್ಯುಲೆನ್ಸ್‌ನಲ್ಲಿ ಹಾಕಿ ಶಿಫ್ಟ್ ಮಾಡಲಾಯಿತು. ಈ ದೃಶ್ಯವನ್ನು ಕಂಡ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, “ಆಸ್ಪತ್ರೆಯಲ್ಲಿ ಕರುಣೆ ಸತ್ತುಹೋಯಿತೇ?” ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಬಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ. ಅಶೋಕ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದು, “ಘಟನೆ ಗಂಭೀರವಾಗಿದೆ. ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದ್ದಾರೆ.
https://shorturl.fm/9rUXL