ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಹಿಡಕಲ್ಲ ಗ್ರಾಮದ ಲಕ್ಕಪ್ಪ ಬಬಲ್ಯಾಗೋಳ ಅವರ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಯಭಾಗ ತಾಲೂಕಿನ ಹಿಡಕಲ್ಲ ಗ್ರಾಮದ ಮಲಕಾರಿ ಹುಡೇದಮನಿ, ಹಾಲಪ್ಪ ಬಬಲ್ಯಾಗೋಳ, ವಿಠಲ ಬಬಲ್ಯಾಗೋಳ ಆರೋಪಿಗಳನ್ನು ಬಂಧಿಸಲಾಗಿದೆ.
ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಲಕ್ಕಪ್ಪ ಫೆ.6 ರಂದು ಕೆಲಸ ಮುಗಿಸಿ, ತಮ್ಮ ಕೃಷಿಭೂಮಿಯತ್ತ ಹೊರಟಿದ್ದರು.ಆ ಸಂದರ್ಭದಲ್ಲಿ ಅಡ್ಡಗಟ್ಟಿದ ನಾಲ್ವರು ತಮ್ಮ ಬೈಕ್‌ನಲ್ಲಿನ ಪೆಟ್ರೋಲ್ ಬೇಕೆಂದು ಕೇಳಿದ್ದಾರೆ. ಲಕ್ಕಪ್ಪ ಪೆಟ್ರೋಲ್ ತೆಗೆದುಕೊಡಲು ಮುಂದಾದಾಗ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದು ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ 8 ದಿನಗಳಿಂದ ಇದ್ದ ಲಕ್ಕಪ್ಪ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಸಾವನ್ನಪ್ಪಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಸುದ್ದಿಗಾರರಿಗೆ ತಿಳಿಸಿದ್ದಾರೆ.