ಬೆಳಗಾವಿ ತಾಲೂಕಿನ ಗೌಂಡವಾಡ ಗ್ರಾಮದಲ್ಲಿ ದೇವಸ್ಥಾನ ಜಮೀನು ವಿವಾದಕ್ಕೆ ಸಂಬಂಧಿಸಿ ಸಾಮಾಜಿಕ ಕಾರ್ಯಕರ್ತ ಸತೀಶ ಪಾಟೀಲ ಹತ್ಯೆ ಪ್ರಕರಣದಲ್ಲಿ ಐವರಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ ₹13.74 ಲಕ್ಷ ದಂಡ ವಿಧಿಸಲಾಗಿದೆ.
ಇಲ್ಲಿನ ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಗಂಗಾಧರ ಕೆ.ಎನ್. ಅವರು ಶನಿವಾರ ತೀರ್ಪು ಪ್ರಕಟಿಸಿದರು.
ಜೀವಾವಧಿ ಶಿಕ್ಷೆಗೆ ಗುರಿಯಾದವರು:
ಆನಂದ ಕುಟ್ರೆ, ಅರ್ಣವ್ ಕುಟ್ರೆ, ಜಯಪ್ಪ ಅಲಿಯಾಸ್ ಬಾಳು ನಿಲಜಕರ, ಮಹಾಂತೇಶ ಅಲಿಯಾಸ್ ಧನರಾಜ ನಿಲಜಕರ ಮತ್ತು ಶಶಿಕಲಾ ಅಲಿಯಾಸ್ ಅನಿತಾ ಕುಟ್ರೆ.
ಆರು ತಿಂಗಳ ಸಾದಾ ಶಿಕ್ಷೆ + ₹1,000 ದಂಡ:
ಸುರೇಖಾ ನಿಲಜಕರ, ಸಂಜನಾ ನಿಲಜಕರ, ವಸಂತ ಪಾಟೀಲ ಹಾಗೂ ಪರಶುರಾಮ ಮುತಗೇಕರ.
ಉಳಿದ ಆರೋಪಿಗಳು ಖುಲಾಸೆಗೊಂಡಿದ್ದಾರೆ.
2022ರ ಜೂನ್ 18ರಂದು ಸುಮಾರು 25 ಜನರ ಗುಂಪು ಸೇರಿ ಸತೀಶ ಪಾಟೀಲರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣವನ್ನು ಕಾಕತಿ ಠಾಣೆ ಪೊಲೀಸರು ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.