ಬೆಳಗಾವಿ ನಗರದ ರಾಣಿ ಚನ್ನಮ್ಮ ನಗರದಲ್ಲಿ ಮಹಿಳೆಯೊಬ್ಬರ ಕಣ್ಣಿಗೆ ಮೆಣಸಿನಪುಡಿ ಎರಚಿ, ಅವರು ಧರಿಸಿದ್ದ ₹3.50 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಶಹಾಪುರ ಶಾಸ್ತ್ರಿ ನಗರದ 2ನೇ ಕ್ರಾಸ್ ನಿವಾಸಿ ಸ್ವಾಗತ ರಘುನಾಥ ಢಾಪಳೆ ಬಂಧಿತ ಆರೋಪಿಯಾಗಿದ್ದಾನೆ.
ಮಾಸ್ಕ್ ಧರಿಸಿ ಜ.27ರಂದು ಮನೆಗೆ ನುಗ್ಗಿದ ಕಳ್ಳ ಪ್ರಿಯಾಂಕಾದೇವಿ ಮುರುಗನ್ ಅವರ ಕಣ್ಣಿಗೆ ಮೆಣಸಿನ ಪುಡಿ ಎರಚಿ ಕಳ್ಳತನ ಮಾಡಿದ್ದ. ಮೊಬೈಲ್ ಲೋಕೇಷನ್ ಆಧರಿಸಿ ಆತನನ್ನು ಬಂಧಿಸಿ, ₹3.50 ಲಕ್ಷ ಮೌಲ್ಯದ 52 ಗ್ರಾಂ ತೂಕದ ಚಿನ್ನಾಭರಣ ವಶಕ್ಕೆ ಪಡೆದಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.