ಬೆಳಗಾವಿ | ಶಿವಾಜಿ ರಕ್ಷಣೆಗೆ ನಿಂತವರು ಮುಸ್ಲಿಂ ಸಮುದಾಯ

Date:

Advertisements

ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿಡಾ.ಸರಜೂ ಕಾಟ್ಕ‌ರ್ ಅವರ ಛತ್ರಪತಿ “ಶಿವಾಜಿ ದಿ ಗ್ರೇಟ್ ಮರಾಠಾ” ಪುಸ್ತಕ ಬಿಡುಗಡೆಗೊಳಿಸಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ ಶಿವಾಜಿ ರಕ್ಷಣೆಗೆ ನಿಂತವರೇ ಮುಸ್ಲಿಂ ಸಮುದಾಯದವರು, ಅಪ್ಟಲ್ ಖಾನ್ ನ್ನು ಮುಗಿಸಲು ಮುಸ್ಲಿಂರ ಸಹಾಯ ಇದೆ. ಇದನ್ನು ತಿರುಚುವ ಪ್ರಯತ್ನ ಆಗಬಾರದು ಎಂದರು.

ಶಿವಾಜಿ ಜೊತೆಗೆ ಹಿಂದುಗಳಿಗಿಂತ ಮುಸ್ಲಿಮರೇ ಹೆಚ್ಚಾಗಿದ್ದರು. ಶಿವಾಜಿ ರಕ್ಷಣೆಗೆ ನಿಂತವರೇ ಮುಸ್ಲಿಂ ಸಮುದಾಯದವರು, ಅಪ್ಟಲ್ ಖಾನ್ ನ್ನು ಮುಗಿಸಲು ಮುಸ್ಲಿಂರ ಸಹಾಯ ಇದೆ. ಇದನ್ನು ತಿರುಚುವ ಪ್ರಯತ್ನ ಆಗಬಾರದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಛತ್ರಪತಿ ಶಿವಾಜಿ ಮಹಾರಾಜರು ಇತಿಹಾಸ ಜಗತ್ತಿಗೆ ಪರಿಚಯಿಸಿದರು ಜ್ಯೋತಿಬಾ ಪುಲೆ ಅವರು, ಶಿವಾಜಿ ಜೊತೆಗೆ ಹಿಂದುಗಳಿಗಿಂತ ಮುಸ್ಲಿಮರೇ ಹೆಚ್ಚಾಗಿದ್ದರು.

Advertisements

ಛತ್ರಪತಿ ಶಿವಾಜಿ ಮಹಾರಾಜರ ಸೈನ್ಯದಲ್ಲಿ ಮರಾಠಾ ಮುಸ್ಲಿಂ ಸಮಾಜದವರು ಸಹೋದರಂತೆ ಇದ್ದರು. ಇಂದಿನ ಕಾಲಘಟ್ಟದಲ್ಲಿ ನೈಜತೆಯನ್ನು ಕಳೆದು ಕೊಳ್ಳುತ್ತಿದ್ದೇವೆ. ನೈಜ ಇತಿಹಾಸ ಸಮಾಜಕ್ಕೆ ತಿಳಿಸುವ ಕೃತಿಗಳು ರಚನೆಯಾಗಬೇಕು ಎಂದರು.

ದೇಶದ ಇತಿಹಾಸ ತಿಳಿಯಲು ಇಂತಹ ಪುಸ್ತಕ ಅಗತ್ಯ. ಶಿವಾಜಿ ಮಹಾರಾಜರ ಕುರಿತು ಈ ಪುಸ್ತಕದಲ್ಲಿ ನೈಜ ರೂಪದಲ್ಲಿ ಹೇಳುವ ಪ್ರಯತ್ನ ಡಾ. ಸರಜೂ ಕಾಟ್ಕರ್ ಅವರು ಮಾಡಿದ್ದಾರೆ. ಸರಿಯಾದ ದೃಷ್ಟಿ ಕೋನದಿಂದ ಓದಿದಾಗ ಇತಿಹಾಸ ತಿಳಿಯುತ್ತದೆ

ಶಿವಾಜಿ ಮರಾಠಕ್ಕಷ್ಟೇ ಸೀಮಿತವಲ್ಲ, ಬಸವಾದಿ ಶರಣರು ಲಿಂಗಾಯತರಿಗಷ್ಟೇ ಸೀಮಿತವಲ್ಲ, ಹಾಗೆಯೇ ಬಾಬಾ ಸಾಹೇಜ ಅಂಬೇಡ್ಕರ್ ಅವರು ದಲಿತರಿಗಷ್ಟೆ ಸೀಮಿತರಾದವರಲ್ಲ. ಹೀಗಾಗಿ ದೇಶದ ಜನತೆ ನಿಜಾಂಶ ತಿಳಿದುಕೊಳ್ಳಬೇಕು ಎಂದು ಸಚಿವರು ಸಲಹೆ ನೀಡಿದರು.

ಈ ವೇಳೆ ಕೃತಿಕಾರ ಡಾ.ಸರಜೂ ಕಾಟ್ಕರ ಕೃತಿ ರಚನೆ ಕುರಿತು ಮಾತನಾಡಿದರು. ರಾಮಕೃಷ್ಣ ಮರಾಠ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಅಧ್ಯಕ್ಷತೆಯನ್ನು ಡಾ.ಮನು ಬಳಿಗಾರ ವಹಿಸಿದ್ದರು. ಡಾ. ಗುರುದೇವಿ ಹುಲೆಪ್ಪನವರಮಠ, ಯ.ರು. ಪಾಟೀಲ ಕೃತಿ ಪರಿಚಯ ಮಾಡಿದರು. ಬಸವರಾಜ ಕುಪ್ಪಸಗೌಡರ ನಿರೂಪಿಸಿದರು. ಪತ್ನಿ ಸುಮಾ ಕಾಟ್ಕರ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೈಕ್ ಮತ್ತು ಬಸ್ ನಡುವೆ ಅಪಘಾತ ಗರ್ಭಿಣಿ ಸಾವು

ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ನವಿಪೇಠ ರಸ್ತೆಯಲ್ಲಿ ಬಸ್ ಮತ್ತು ಬೈಕ್...

ಬೆಳಗಾವಿ : ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ಬುಧವಾರ ರಜೆ

ಬೆಳಗಾವಿ ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ನಾಳೆ ಬುಧವಾರ...

ಬೆಳಗಾವಿ : ಹಾಸ್ಟೆಲ್‌ನಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ

ಬೆಳಗಾವಿಯ ಬಿಮ್ಸ್ ಆವರಣದಲ್ಲಿರುವ ಹಾಸ್ಟೆಲ್‌ನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

Download Eedina App Android / iOS

X