ಬೆಳಗಾವಿ : ಸೈಬರ್ ವಂಚನೆ ಮೂವರು ಯುವಕರ ಬಂಧನ

Date:

Advertisements

ತಮಿಳುನಾಡು ಪೊಲೀಸ್ ಇಲಾಖೆಯ ವಿಶೇಷ ಸೂಚನೆಯ ಮೇರೆಗೆ, ಚೆನ್ನೈ ಪೊಲೀಸರು ಗುರುವಾರ ಬೆಳಗಾವಿಗೆ ಆಗಮಿಸಿ, ಅನಿಲ್ ಕೊಲ್ಲಾಪುರ, ರೋಹನ್ ಕಾಂಬ್ಳೆ ಮತ್ತು ಸರ್ವೇಶ್ ಕಿವಿ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಸೈಬರ್ ಕ್ರೈಂ ತನಿಖಾಧಿಕಾರಿಗಳ ಪ್ರಕಾರ, ಆರೋಪಿಗಳು ನಕಲಿ ಕಂಪನಿಯ ಹೆಸರಿನಲ್ಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕ್ ಖಾತೆಗಳನ್ನು ತೆರೆಯುತ್ತಿದ್ದರು. ಈ ಖಾತೆಗಳನ್ನು ಬಳಸಿ ಆನ್‌ಲೈನ್ ವಂಚನೆ ಎಸಗಲಾಗುತ್ತಿತ್ತು.

ಆರೋಪಿಗಳನ್ನು ಬೆಳಗಾವಿಯ ಮೂರನೇ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಅವರನ್ನು ಚೆನ್ನೈಗೆ ಕರೆದೊಯ್ಯಲಾಗಿದೆ. ಈವರೆಗೆ ಈ ಖಾತೆಗಳಿಗೆ ಸಂಬಂಧಿಸಿದಂತೆ 27 ವಂಚನೆ ಪ್ರಕರಣಗಳು ಪತ್ತೆಯಾಗಿದ್ದು, ಆರೋಪಿಗಳು ಬೆಂಗಳೂರು ಮತ್ತು ತುಮಕೂರಿನಲ್ಲಿಯೂ ಇಂತಹವೇ ರೀತಿಯ ವಂಚನೆ ಎಸಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಈ ಕುರಿತು ಮಾಹಿತಿ ನೀಡಿದ ಅಧಿಕಾರಿಯೊಬ್ಬರು, “ಆರೋಪಿಗಳು ನಕಲಿ ಕಂಪನಿಗಳ ಹೆಸರಿನಲ್ಲಿ ಜನರನ್ನು ಮಿಕ್ಕಿಸುತ್ತಿದ್ದರು. ಬ್ಯಾಂಕ್ ಖಾತೆಗಳ ಮೂಲಕ ಹಣ ಸಂಗ್ರಹಿಸಿ, ತಕ್ಷಣವೇ ಅದನ್ನು ಬೇರೆ ಖಾತೆಗೆ ವರ್ಗಾಯಿಸುತ್ತಿದ್ದರು. ಪೊಲೀಸರು ಕೂಡ ಕೆಲವೊಂದು ಪ್ರಕರಣಗಳಲ್ಲಿ ಮೋಸಕ್ಕೊಳಗಾಗಿರುವ ಶಂಕೆ ಇದೆ,” ಎಂದು ತಿಳಿಸಿದ್ದಾರೆ.

ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ ಸೈಬರ್ ಕ್ರೈಂ ವಿಭಾಗ, “ಅಪರಿಚಿತ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವ ಅಥವಾ ವೈಯಕ್ತಿಕ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುವ ಮೊದಲು ಜಾಗರೂಕತೆ ಅಗತ್ಯ. ಇಂತಹ ಅಜಾಗರೂಕತೆಗಳು ದೊಡ್ಡ ಮಟ್ಟದ ಆರ್ಥಿಕ ನಷ್ಟವನ್ನು ಉಂಟುಮಾಡಬಹುದು,” ಎಂದು ಸೂಚಿಸಿದೆ.

ee dina logo with tagline copy
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ : ಜಾರಕಿಹೊಳಿ ಸಹೋದರರಿಂದ ಹುಕ್ಕೇರಿಯಲ್ಲಿ ಮದ್ಯ–ಮಾಂಸ ಬಾಡೂಟ : ರಮೇಶ ಕತ್ತಿ ಆರೋಪ

ಬೆಳಗಾವಿ ಜಿಲ್ಲೆಯ ಸಹಕಾರಿ ಸಂಘಗಳ ಚುನಾವಣಾ ಹಿನ್ನಲೆಯಲ್ಲಿ ಹುಕ್ಕೇರಿ ತಾಲೂಕಿನ ಹಲವು...

ಬೆಳಗಾವಿ : ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬದಲಾವಣೆ ಪ್ರಿಂಟ್ ಮಿಸ್ಟೇಕ್ ? : ಶಾಸಕ ರಾಜು ಕಾಗೆ

ಬೆಳಗಾವಿ ಜಿಲ್ಲೆಯ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ಶಾಸಕ ರಾಜು ಕಾಗೆ...

ಬೆಳಗಾವಿ : ಸಭೆಯಲ್ಲಿ ಕಣ್ಣೀರು ಹಾಕಿದ ಮಾಜಿ ಸಂಸದ ರಮೇಶ ಕತ್ತಿ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ದಿವಂಗತ ಮಾಜಿ ಸಚಿವ...

ಬೆಳಗಾವಿ : ನಗರದಲ್ಲಿ ರೈತರ ಪ್ರತಿಭಟನೆ ಎಫ್‌ಐಆರ್ ದಾಖಲು

ಜೈ ಕಿಸಾನ್ ತರಕಾರಿ ಮಾರುಕಟ್ಟೆ ಓಪನ್ ಮಾಡುವಂತೆ ಆಗ್ರಹಿಸಿ ಚೆನ್ನಮ್ಮ ವೃತ್ತದಲ್ಲಿ...

Download Eedina App Android / iOS

X