ಬೆಳಗಾವಿ ನಗರದ ಸಮರ್ಥ ನಗರ ಏಳನೇ ಕ್ರಾಸ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ಮೂರು ಆರೋಪಿಗಳನ್ನು ಮಾರ್ಕೆಟ್ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಸಮರ್ಥನಗರದ ಅನಿಕೇತ ರಾಮಾ ಲೋಹಾರ (27), ಮಚ್ಛೆ ಗ್ರಾಮದ ಅಲ್ತಮಶ್ ಅಯೂಬ್‌ಖಾನ್ ಪಠಾಣ (25) ಹಾಗೂ ಸದ್ದಾಮ್ ಹುಸೇನ್ ಸರ್ದಾರ್ ಪಠಾಣ (24) ಎಂದು ಗುರುತಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಈ ಆರೋಪಿಗಳು ಹೆರಾಯಿನ್ ಮಾರಾಟದಲ್ಲಿ ತೊಡಗಿದ್ದರು. ಇವರಿಂದ 60.36 ಗ್ರಾಂ ಹೆರಾಯಿನ್ (ಅಂದಾಜು ಮೌಲ್ಯ ₹48,400) ಹಾಗೂ ₹1 ಲಕ್ಷ ಮೌಲ್ಯದ ಆಟೊರಿಕ್ಷಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಾರ್ಕೆಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರಿಸಿದ್ದಾರೆ. ಮಾದಕವಸ್ತು ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ.